ರಾಷ್ಟ್ರೀಯ

ವೀರ ಸಾವರ್ಕರ್‌ ಹೇಡಿಯಲ್ಲ: ಜೈರಾಮ್‌ ರಮೇಶ್‌

Pinterest LinkedIn Tumblr


ಬೆಂಗಳೂರು: ಪೋರ್ಟ್‌ಬ್ಲೇರ್‌ನ ಸೆಲ್ಯುಲಾರ್‌ ಜೈಲ್‌ನಲ್ಲಿದ್ದ ನರಕ ಸದೃಶ ದೃಶ್ಯಗಳನ್ನು ಬೇರೆ ಯಾವುದೇ ಜೈಲುಗಳಲ್ಲಿಲ್ಲ. ಹಾಗಾಗಿ ಸಾವರ್ಕರ್‌ ಜಾಗದಲ್ಲಿ ನಾನೇ ಇದ್ದರೂ ಬ್ರಿಟಿಷರಿಗೆ ಕ್ಷಮಾಪಣೆ ಕೋರಿ ಪತ್ರ ಬರೆಯುತ್ತಿದ್ದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಹೇಳಿದರು.

ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಆವರಣದಲ್ಲಿ’ಟೈಮ್ಸ್‌ ಗ್ರೂಪ್‌’ ಶನಿವಾರ ಹಮ್ಮಿಕೊಂಡಿದ್ದ ‘ಟೈಮ್ಸ್‌ ಲಿಟ್‌ ಫೆಸ್ಟ್‌’ನಲ್ಲಿ’ ರಿಲೆವೆನ್ಸ್‌ ಆಫ್‌ ಪೊಲಿಟಿಕಲ್‌ ಬಯೋಗ್ರಫಿ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ”ನಾನು ಪೋರ್ಟ್‌ಬ್ಲೇರ್‌ನ ಸೆಲ್ಯೂಲಾರ್‌ ಜೈಲ್‌ಗೆ ಭೇಟಿ ನೀಡಿ 3 ಗಂಟೆಗಳಷ್ಟು ಕಾಲ ಕಳೆದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡಿಟ್ಟಿದ್ದ ಇತರೆ ಜೈಲ್‌ಗಳಿಗೂ ಭೇಟಿ ನೀಡಿದ್ದೇನೆ. ಆದರೆ, ಪೋರ್ಟ್‌ಬ್ಲೇರ್‌ನ ಸೆಲ್ಯುಲಾರ್‌ ಜೈಲ್‌ನಲ್ಲಿದ್ದ ನರಕ ಸದೃಶ ದೃಶ್ಯಗಳನ್ನು ಬೇರೆ ಯಾವುದೇ ಜೈಲುಗಳಲ್ಲಿಲ್ಲ. ಅಂಥ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು ಎಂಬ ಪ್ರಶ್ನೆ ಕಾಡುತ್ತದೆ. ಹಾಗಾಗಿ ಸಾವರ್ಕರ್‌ ಜಾಗದಲ್ಲಿ ನಾನೇ ಇದ್ದರೂ ಬ್ರಿಟಿಷರಿಗೆ ಕ್ಷಮಾಪಣೆ ಕೋರಿ ಪತ್ರ ಬರೆಯುತ್ತಿದ್ದೆ,” ಎಂದರು.

ಸಾವರ್ಕರ್‌ ಹೇಡಿ ಅಲ್ಲ
ಇದೇ ವೇಳೆ ಮಾತನಾಡಿದ ಲೇಖಕ ವೈಭವ್‌ ಪುರಂದರೆ, ”ಸಾವರ್ಕರ್‌ ಅವರನ್ನು ಟೀಕಿಸಲು ಸಾಕಷ್ಟು ವಿಷಯಗಳಿವೆ. ಆದರೆ, ಅವರಿಗಿದ್ದ ದೇಶಪ್ರೇಮವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಹಾಗಾಗಿ, ಅಂತಹ ಒಬ್ಬ ಅಪ್ಪಟ ದೇಶಪ್ರೇಮಿಯನ್ನು ರಾಹುಲ್‌ ಗಾಂಧಿ ಅವರು ಹೇಡಿ ಎಂದು ಕರೆಯುವುದು ಸರಿಯಲ್ಲ” ಎಂದು ಹೇಳಿದರು.

”ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಅಂತಿಮವಾಗಿ ಬ್ರಿಟಷರಿಗೆ ಕ್ಷಮಾಪಣೆ ಕೋರಿ ಪತ್ರ ಬರೆದ ಹಲವರಿದ್ದಾರೆ. ಆದರೆ, ಅಂತಹ ಯಾರ‍ನ್ನೂ ಟೀಕಿಸದೆ ಸಾವರ್ಕರ್‌ ಒಬ್ಬರನ್ನು ಟೀಕಿಸುವುದು ಸರಿಯಲ್ಲ” ಎಂದರು.

Comments are closed.