ರಾಷ್ಟ್ರೀಯ

ಸಲಿಂಗ ದಂಪತಿಯಿಂದ ವಿವಾಹ ಸಿಂಧುಗೊಳಿಸಲು ಹೈಕೋರ್ಟ್ ಮೊರೆ

Pinterest LinkedIn Tumblr


ಕೊಚ್ಚಿ: ಜೀವನದಲ್ಲಿ ಹಲವು ಎಡರು ತೊಡರುಗಳನ್ನು ಎದುರಿಸಿದ ನಂತರ ಕೇರಳದ ಮೊದಲ ಸಲಿಂಗ ವಿವಾಹಿತ ಜೋಡಿ ಕಾನೂನಿನ ತೊಡಕನ್ನು ಎದುರಿಸುತ್ತಿದ್ದಾರೆ.

ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಕಕ್ಕನಾಡಿನಲ್ಲಿ ವಾಸಿಸುತ್ತಿರುವ 35 ವರ್ಷದ ಪಿ ಪಿ ನಿಕೇಶ್ ಮತ್ತು 31 ವರ್ಷದ ಸೋನು ವೃತ್ತಿಯಲ್ಲಿ ಕ್ರಮವಾಗಿ ಉದ್ಯಮಿ ಮತ್ತು ಐಟಿ ಉದ್ಯೋಗಿಗಳಾಗಿದ್ದಾರೆ. ಮೇ 2018ರಲ್ಲಿ ಭೇಟಿಯಾಗಿದ್ದ ಇವರು ಪರಸ್ಪರ ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರು.ದೇವರು ಮತ್ತು ಹಿಂದೂ ಧರ್ಮದ ಮೇಲಿನ ನಂಬಿಕೆಯಂತೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮದುವೆಯಾಗಲು ಬಯಸಿದ್ದರು. ಅದರಂತೆ ಹಲವರಿಂದ ಸಲಹೆ ಪಡೆಯಲು ಹೋದಾಗ ಅವರಿಗೆ ಸಿಕ್ಕಿದ್ದು ನಿರಾಶೆಯೇ.

ಆದರೂ ಗುರುವಾಯೂರು ದೇವಸ್ಥಾನಕ್ಕೆ ಹೋಗಿ 2018ರ ಜುಲೈ 5ರಂದು ದೇವಸ್ಥಾನದ ಕಾರು ನಿಲುಗಡೆ ಪ್ರದೇಶದಲ್ಲಿ ಗೌಪ್ಯವಾಗಿ ವಿವಾಹವಾದರು. ದೇವಸ್ಥಾನದ ಅಧಿಕಾರಿಗಳು ಇವರ ಮದುವೆ ಮಾಡಿಸಲು ಒಪ್ಪಲಿಲ್ಲವಂತೆ, ಮದುವೆಯಾದದ್ದಕ್ಕೆ ಸರ್ಟಿಫಿಕೇಟ್ ಕೂಡ ಕೊಡಲಿಲ್ಲ. ಜನರ ಮನವೊಲಿಸಲು ಮಾಡಿದ ಪ್ರಯತ್ನ ಕೈಗೂಡಲಿಲ್ಲ. ಹೀಗಾಗಿ ಕಾನೂನಿನ ಮೊರೆ ಹೋಗಿ ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯನ್ನು ಸಿಂಧುಗೊಳಿಸಿ ಎಂದು ಮೊರೆಯಿಟ್ಟರು. ಆದರೆ ಅಧಿಕಾರಿಗಳು ಕೂಡ ಅವರ ಮನವಿಯನ್ನು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ.

Comments are closed.