ಕರ್ನಾಟಕ

ಕುಮಾರಸ್ವಾಮಿಗೆ ತಾಕತ್ತಿದ್ದರೆ ಆರ್​ಎಸ್​ಎಸ್​​ ಮತ್ತು ಬಜರಂಗದಳ ನಿಷೇಧ ಮಾಡಲಿ: ಕಲ್ಲಡ್ಕ ಪ್ರಭಾಕರ್​​​​​ ಭಟ್

Pinterest LinkedIn Tumblr


ಬೆಂಗಳೂರು(ಜ.28): ಎಚ್​​.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್​ಎಸ್​ಎಸ್​) ನಿಷೇಧಿಸಿ ತಮ್ಮ ತಾಕತ್ತು ತೋರಿಸಬೇಕಿತ್ತು ಎಂದು ಆರ್​ಎಸ್​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ್​​​​​ ಭಟ್​​ ಸವಾಲ್​​ ಹಾಕಿದರು. ಇಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಕಲ್ಲಡ್ಕ ಪ್ರಭಾಕರ್​​​ ಭಟ್, ಮಾಜಿ ಸಿಎಂ ಕುಮಾರಸ್ವಾಮಿ ಆರ್​ಎಸ್​ಎಸ್​ ನಿಷೇಧ ಮಾಡಬೇಕೆಂದು ಆಗ್ರಹ ಮಾಡುತ್ತಾರೆ. ಇವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆರ್​ಎಸ್​ಎಸ್​ ಮೇಲೆ ನಿಷೇಧ ಹೇರುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಬೇಕಿತ್ತು ಎಂದರು.

ಆರ್​ಎಸ್​ಎಸ್​ ಮತ್ತು ಬಜರಂಗದಳ ದೇಶಸೇವೆ ಮಾಡುತ್ತಿವೆ. ಜನರಿಗೆ ದೇಶಭಕ್ತಿ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಗೋಮಾತೆ ಮತ್ತು ಮಹಿಳೆಯರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ. ಯಾರನ್ನೂ ಹೊಡೆಯುವ, ಬಡಿಯುವ ಸಂಸ್ಕೃತಿ ನಮ್ಮದಲ್ಲ. ಹೀಗಿದ್ದರೂ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಆರ್​ಎಸ್​ಎಸ್​ ಬಗ್ಗೆ ಸುಖಾಸುಮ್ಮನೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು ಕಲ್ಲಡ್ಕ ಪ್ರಭಾಕರ್​​​ ಭಟ್.

ಹಿಂದೂ ಸಮಾಜದ ರಕ್ಷಣೆ ನಮ್ಮ ಹೊಣೆ. ಆರ್​ಎಸ್​ಎಸ್​ ಹಿಂದೆ ಇಡೀ ಹಿಂದೂ ಸಮಾಜವೇ ಬರುತ್ತಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆಯೂ ಮಹಾತ್ಮ ಗಾಂಧೀಜಿ ಕೊಲೆ ಪ್ರಕರಣ ಮುಂದಿಟ್ಟುಕೊಂಡು ಆರ್​ಎಸ್​ಎಸ್​​ ಮೇಲೆ ನೀಷೇಧ ಹೇರಲಾಗಿತ್ತು. ಅಷ್ಟೇ ಬೇಗ ಆರ್​ಎಸ್​ಎಸ್​ ಮೇಲಿನ ನಿಷೇಧ ತೆರವುಗೊಳಿಸಲಾಗಿತ್ತು ಎಂದು ತಿಳಿಸಿದರು.

ಇನ್ನು ಮುಸ್ಲಿಮರು ಮತ್ತು ಕ್ರೈಸ್ತರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹೊಂದಿದ್ದಾರೆ. ಹಿಂದೂ ಸಮಾಜದ ಹೆಣ್ಣುಮಕ್ಕಳನ್ನು ಮೋಸ ಮಾಡಿ ಮದುವೆ ಆಗುತ್ತಿದ್ದಾರೆ. ಗೋವುಗಳ ಮಾರಣಹೋಮ ನಡೆಯುತ್ತಿದೆ. ಇದನ್ನು ತಡೆಯುವುದು ಆರ್​ಎಸ್​ಎಸ್​ ಕರ್ತವ್ಯ ಎಂದು ಕಲ್ಲಡ್ಕ ಪ್ರಭಾಕರ್​​ ಭಟ್​​ ಕುಟುಕಿದರು.

ಈ ಹಿಂದೆಯೇ ಆರ್​ಎಸ್​ಎಸ್​ ಮತ್ತು ಭಜರಂಗ ದಳ ಕೋಮುದ್ವೇಷ ಬಿತ್ತುತ್ತಿವೆ. ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕಬೇಕು. ಈ ಬದಲಾವಣೆ ಆರ್​ಎಸ್​ಎಸ್​ ನಿಷೇಧದಿಂದ ಸಾಧ್ಯ. ಸಮಾಜದ ನೆಮ್ಮದಿಗಾಗಿ ಮೊದಲು ಆರ್​ಎಸ್​ಎಸ್​ ಮತ್ತು ಭಜರಂಗ ದಳ ನಿಷೇಧಿಸಬೇಕು. ಮಹಾತ್ಮ ಗಾಂಧಿಯವರನ್ನೇ ಕೊಂದ ಆರ್​ಎಸ್​ಎಸ್​​ ನನ್ನನ್ನು ಬಿಡುತ್ತಾ? ಎಂದು ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದರು.

Comments are closed.