ರಾಷ್ಟ್ರೀಯ

ಯುವತಿಯ ಯೋನಿಯೊಳಗೆ ಕಬ್ಬಿಣದ ರಾಡ್ ತುರುಕಿದ ಆರೋಪಿ ಬಂಧನ

Pinterest LinkedIn Tumblr


ನಾಗ್ಪುರ್: 19 ವರ್ಷದ ಯುವತಿಯೊಬ್ಬಳ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿ ಆಕೆ ಪ್ರಜ್ಞಾಹೀನಳಾದ ನಂತರ ಆಕೆಯ ಯೋನಿಯೊಳಗೆ ಕಬ್ಬಿಣದ ಸರಳನ್ನು ತುರುಕಿರುವ ಭೀಭತ್ಸ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

ಈ ಭೀಕರ ಘಟನೆ ಜನವರಿ 21ರಂದು ನಡೆದಿದ್ದು, ಆರೋಪಿ ಯೋಗಿಲಾಲ್ ರಂಗದಾಳೆ(52ವರ್ಷ) ಎಂಬಾತನನ್ನು ಬಂಧಿಸಲಾಗಿದೆ. ಈತ ನೂಲು ತೆಗೆಯುವ ಮಿಲ್ ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಎಂದು ನಾಗ್ಪುರ ಪೊಲೀಸರು ತಿಳಿಸಿದ್ದಾರೆ.

ಈ ಯುವತಿ ಮತ್ತು ಆಕೆಯ ಅಣ್ಣ, ಆರೋಪಿ ಯೋಗಿಲಾಲ್ ಹಾಗೂ ಮತ್ತೊಬ್ಬ ಮಹಿಳೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಸಂತ್ರಸ್ತೆ ಅಣ್ಣ ಜನವರಿ 21ರಂದು ತನ್ನ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಇನ್ಸ್ ಪೆಕ್ಟರ್ ಸುನೀಲ್ ಚವಾಣ್ ತಿಳಿಸಿದ್ದಾರೆ.

ಯುವತಿ ರೂಂನಲ್ಲಿ ಒಬ್ಬಂಟಿಯಾಗಿ ಇರುವುದನ್ನು ಗಮನಿಸಿದ ರಂಗದಾಳೆ ರಾತ್ರಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಬಾಯಿಯೊಳಗೆ ಬಟ್ಟೆಯನ್ನು ತುಂಬಿ ಅತ್ಯಾಚಾರ ಎಸಗಿದ್ದ. ಯುವತಿ ಪ್ರಜ್ಞಾಹೀನಳಾದ ನಂತರ ಆರೋಪಿ ಆಕೆಯ ಖಾಸಗಿ ಭಾಗದೊಳಕ್ಕೆ ಕಬ್ಬಿಣದ ರಾಡ್ ಅನ್ನು ತುರುಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

ಘಟನೆ ನಡೆದು ಮೂರು ದಿನಗಳ ಬಳಿಕ ಯುವತಿ ಈ ವಿಚಾರವನ್ನು ಅಣ್ಣನಿಗೆ ತಿಳಿಸಿದ್ದು, ಸೋಮವಾರ ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ವರದಿ ವಿವರಿಸಿದೆ.

Comments are closed.