ರಾಷ್ಟ್ರೀಯ

ತಮಿಳುನಾಡು ಬಿಜೆಪಿ ಘಟಕದಿಂದ ಒಮರ್‌ ಅಬ್ದುಲ್ಲಾಗೆ ರೇಜರ್

Pinterest LinkedIn Tumblr


ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರಿಗೆ ರೇಜರ್‌ ಕಳುಹಿಸಿ ತಮಿಳುನಾಡು ಬಿಜೆಪಿ ಘಟಕ ಅವರ ಸದ್ಯದ ಪರಿಸ್ಥಿತಿಯನ್ನು ಗೇಲಿ ಮಾಡಿದೆ. ಕಳೆದ ಆಗಸ್ಟ್‌ನಿಂದ ಗೃಹಬಂಧನದಲ್ಲಿರುವ ಒಮರ್‌ ಅಬ್ದುಲ್ಲಾ ಅವರ ಫೋಟೋ ಇತ್ತೀಚೆಗೆ ಬಿಡುಗಡೆಯಾಗಿತ್ತು. ಅದರಲ್ಲಿ ಅವರು ದಾಡಿ ಬಿಟ್ಟು, ಗುರುತು ಪತ್ತೆಯಾಗದಂತೆ ಕಾಣುತ್ತಿದ್ದರು.

ಇದನ್ನು ಗೇಲಿ ಮಾಡಿರುವ ಬಿಜೆಪಿ, ಅವರಿಗೆ ರೇಜರ್‌ಗಳನ್ನು ಉಡುಗೊರೆ ನೀಡಿರುವ ಚಿತ್ರದ ಜತೆ, ‘ನಿಮ್ಮ ಭ್ರಷ್ಟ ಸ್ನೇಹಿತರು ಹೊರಗಡೆ ಆರಾಮಾಗಿ ಇರುವಾಗ ನಿಮ್ಮನ್ನು ಹೀಗೆ ನೋಡುವುದಕ್ಕೆ ಬೇಸರವಾಗುತ್ತದೆ. ನಾವು ನೀಡಿರುವ ಉಡುಗೊರೆಯನ್ನು ಸ್ವೀಕರಿಸಿ. ಇನ್ನೂ ಏನಾದರೂ ಸಹಾಯ ಬೇಕಿದ್ದರೆ ನಿಮ್ಮ ಸ್ನೇಹಿತ ಕಾಂಗ್ರೆಸ್ಸನ್ನು ಸಂಪರ್ಕಿಸಿ’ ಎಂದು ಬರೆದಿದೆ.

Comments are closed.