ರಾಷ್ಟ್ರೀಯ

ಯುವತಿಯನ್ನು ಹಿಂಬಾಲಿಸುತ್ತಿದ್ದ ಯುವಕನ ಮುಖದ ಮೇಲೆ ಆ್ಯಸಿಡ್

Pinterest LinkedIn Tumblr


ಉತ್ತರಪ್ರದೇಶ(ಉನ್ನಾವ್): ಯುವತಿಯನ್ನು ಹಿಂಬಾಲಿಸುತ್ತಿದ್ದ ಯುವಕನ ಮುಖದ ಮೇಲೆ ಆ್ಯಸಿಡ್ ಎರಚಿರುವ ಘಟನೆ ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ರೋಹಿತ್ ಯಾದವ್ (24) ಎಂಬ ಯುವಕ ಹಿಂಬಾಲಿಸುತ್ತಿರುವುದನ್ನು ಗಮನಿಸಿದ 20 ವರ್ಷದ ಯುವತಿ ಆತನ ಮುಖದ ಮೇಲೆ ಆ್ಯಸಿಡ್ ಎರಚಿದ್ದಳು. ಇದರ ಪರಿಣಾಮ ಆತನ ಎದೆಭಾಗ, ಎಡಭುಜದ ಭಾಗ, ಮುಖದ ಭಾಗ ಸುಟ್ಟು ಹೋಗಿರುವುದಾಗಿ ವರದಿ ತಿಳಿಸಿದೆ.

ಕೂಡಲೇ ಯುವಕನನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಕರೆದೊಯ್ದಿರುವುದಾಗಿ ವರದಿ ವಿವರಿಸಿದೆ. ಮೇಲ್ನೋಟಕ್ಕೆ ಇದೊಂದು ಏಕಮುಖದ ಪ್ರೇಮ ಪ್ರಕರಣದಂತಿದೆ. ಯುವಕ ಆಕೆಯನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿ ಆ್ಯಸಿಡ್ ಎಸೆದಿದ್ದಳು ಎಂದು ಮೋರ್ವಾನ್ ಪೊಲೀಸ್ ಠಾಣಾಧಿಕಾರಿ ರಾಜೇಂದ್ರ ರಾಜಾವತ್ ತಿಳಿಸಿದ್ದಾರೆ.

ಈವರೆಗೂ ಯುವಕ ಆಕೆಯ ಮೇಲೆ ದೂರನ್ನು ದಾಖಲಿಸಿಲ್ಲ. ಒಂದು ವೇಳೆ ದೂರು ದಾಖಲಿಸಿದರೆ ಯುವತಿಯನ್ನು ಬಂಧಿಸಲಾಗುವುದು ಎಂದು ರಾಜಾವತ್ ತಿಳಿಸಿರುವುದಾಗಿ ವರದಿ ಹೇಳಿದೆ.

Comments are closed.