ರಾಷ್ಟ್ರೀಯ

2002ರ ಗುಜರಾತ್ ಗಲಭೆ ಪ್ರಕರಣದ 17 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದ ಸುಪ್ರೀಂ

Pinterest LinkedIn Tumblr


ನವದೆಹಲಿ: 2002ರ ಗುಜರಾತ್ ಗಲಭೆ ಪ್ರಕರಣದ 17 ಆರೋಪಿಗಳಿಗೆ ಸುಪ್ರೀಂಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದ್ದು, ಯಾವುದೇ ಕಾರಣಕ್ಕೂ ಗುಜರಾತ್ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ.

ಹದಿನಾಲ್ಕು ಆರೋಪಿಗಳು ಸಾಮಾಜಿಕ ಮತ್ತು ಧಾರ್ಮಿಕ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ಕೋರ್ಟ್ ಜಾಮೀನು ಆದೇಶದಲ್ಲಿ ಸೂಚಿಸಿದೆ.

ಆರೋಪಿಗಳು ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಇಂದೋರ್ ಮತ್ತು ಮಧ್ಯಪ್ರದೇಶದ ಜಬಲ್ ಪುರ್ ಜಿಲ್ಲಾ ಕಾನೂನು ಸಲಹಾ ಮಂಡಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

2002ರ ಫೆಬ್ರುವರಿ 27ರಂದು ಗೋಧ್ರಾದಲ್ಲಿ ಸಾಬರ್ ಮತಿ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗೆ ಬೆಂಕಿ ಹಚ್ಚಿ ಹಿಂದು ಕರಸೇವಕರನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆ ಬಳಿಕ ಗುಜರಾತ್ ನ ಸರ್ದಾಪುರ್ ನಲ್ಲಿ ನಡೆದ ಗಲಭೆಯಲ್ಲಿ 33 ಮುಸ್ಲಿಮರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ 17 ಮಂದಿ ದೋಷಿಯಾಗಿ ಶಿಕ್ಷೆ ಅನುಭವಿಸುತ್ತಿದ್ದರು ಎಂದು ವರದಿ ತಿಳಿಸಿದೆ.

Comments are closed.