ರಾಷ್ಟ್ರೀಯ

ಸೊಸೆಗೆ ಪೋರ್ನ್ ವಿಡಿಯೋ ತೋರಿಸಿ ಅತ್ಯಾಚಾರಕ್ಕೆ ಯತ್ನ: ತಂದೆಯ ಕೃತ್ಯಕ್ಕೆ ಮಗ ಸಾಥ್

Pinterest LinkedIn Tumblr


ಪಾಟ್ನಾ: ಮಾವನೊಬ್ಬ ತನ್ನ ಸೊಸೆಗೆ ಪೋರ್ನ್ ವಿಡಿಯೋ ತೋರಿಸಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಬಿಹಾರದ ಮುಜಾಫರ್ಪುರ ನಿವಾಸಿ ಮೊಹಮ್ಮದ್ ಜಾಫರ್ ಜೊತೆ 2012ರಲ್ಲಿ ಮದುವೆಯಾಗಿದ್ದಳು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ನಾಲ್ಕು ವರ್ಷಗಳು ಈ ದಂಪತಿ ತಮ್ಮ ಮಕ್ಕಳೊಂದಿಗೆ ಸಂತೋಷದಿಂದ ಜೀವನ ಮಾಡುತ್ತಿದ್ದರು. ಆದರೆ ನಾಲ್ಕು ವರ್ಷಗಳ ನಂತರ ಜಾಫರ್ ತಂದೆ ಸೊಸೆ ಮೇಲೆ ಕಣ್ಣಾಕಿದ್ದಾನೆ.

ಆರೋಪಿ ಮಾವ ಸೊಸೆಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಸೊಸೆ ರೂಮಿನಲ್ಲಿ ಒಂಟಿಯಾಗಿದ್ದಳು. ಆಗ ಆರೋಪಿ ಸೊಸೆ ರೂಮಿಗೆ ಹೋಗಿ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದನು. ಅಷ್ಟೇ ಅಲ್ಲದೇ ಪೋರ್ನ್ ವಿಡಿಯೋ ತೋರಿಸಿ ಅನೇಕ ಬಾರಿ ಸೊಸೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.

ಕೆಲ ದಿನಗಳವರೆಗೂ ಸೊಸೆ ಮಾವನ ನೀಚ ಕೃತ್ಯಗಳನ್ನು ಸಹಿಸಿಕೊಂಡು ಮೌನವಾಗಿದ್ದಳು. ಆದರೆ ದಿನದಿಂದ ದಿನ ಮಾವ ಅಸಭ್ಯವಾಗಿ ವರ್ತಿಸುತ್ತಿದ್ದನು. ಕೊನೆಗೆ ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ ಪತಿಗೆ ನಡೆದ ಘಟನೆಗಳನ್ನು ವಿವರಿಸಿದ್ದಾಳೆ.

ಆದರೆ ಪತಿ ಜಾಫರ್ ತನ್ನ ತಂದೆಗೆ ಸಾಥ್ ಕೊಟ್ಟಿದ್ದಾನೆ. ಈಗಾಗಲೇ ನಿನಗೆ ಮದುವೆಯಾಗಿ ನಾಲ್ಕು ವರ್ಷ ಆಗಿದೆ. ಮೂವರು ಮಕ್ಕಳಿದ್ದಾರೆ, ನನ್ನ ತಂದೆ ಜೊತೆಯೂ ಸಹಕರಿಸು ಎಂದು ಪತ್ನಿಗೆ ಹೇಳಿದ್ದಾನೆ. ಇತ್ತ ಮಗನೇ ಸಪೋರ್ಟ್ ಮಾಡಿ ನಂತರ ಆರೋಪಿ ಮಾವ ಮತ್ತೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದನು.

ಕೊನೆಗೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯಕ್ಕೆ ಪೊಲೀಸರು ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಾವ ಮತ್ತು ಪತಿಯನ್ನು ವಿಚಾರಣೆಗೆ ಕರೆದಿದ್ದಾರೆ.

Comments are closed.