ರಾಷ್ಟ್ರೀಯ

ಮಹಾರಾಷ್ಟ್ರ ಮುಖ್ಯಮಂತ್ರಿ ವಿವಾದಾತ್ಮಕ ಹೇಳಿಕೆ; ಇಂದು ಶಿರಡಿ ಸಾಯಿಬಾಬಾ ಮಂದಿರ ಬಂದ್​

Pinterest LinkedIn Tumblr


ಶಿರಡಿ: ಭಾನುವಾರದಿಂದ ಶಿರಡಿ ಸಾಯಿ ಬಾಬಾ ದೇವಾಸ್ಥಾನ ಬಂದ್​ ಆಗಲಿದೆ ಎಂದು ಸಾಯಿಬಾಬಾ ಸಂಸ್ಥಾನ ಟ್ರಸ್ಟ್​ ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸಾಯಿ ಬಾಬಾ ಜನ್ಮ ಸ್ಥಳದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇಂದು ಸಂಜೆ ಟ್ರಸ್ಟ್​ನ ಸದಸ್ಯರು ಮತ್ತು ಗ್ರಾಮಸ್ಥರು ಸಭೆ ಸೇರಲಿದ್ದಾರೆ.

ವಿವಾದಾತ್ಮಕ ಹೇಳಿಕೆ ವಿರುದ್ಧ ಭಾನುವಾರ (ಜನವರಿ 19)ದಿಂದ ದೇಗುಲವನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್​ನ ವಾಕ್ಚೌರೆ ತಿಳಿಸಿದ್ದಾರೆ.

ಈ ಸಂಬಂಧ ಚರ್ಚಿಸಲು ಇಂದು ಸಂಜೆ ಸಭೆ ಕರೆಯಲಾಗಿದೆ ಎಂದ ಅವರು, ಬೇರೆ ಸ್ಥಳಗಳಿಂದ ಬರುವ ಭಕ್ತರಿಗೆ ಸಮಸ್ಯೆಯಾಗದಂತೆ ನೋಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Comments are closed.