ರಾಷ್ಟ್ರೀಯ

ಜೆಎನ್ ಯು ದಾಳಿ: ಪೊಲೀಸರಿಂದ ಮುಸುಕುದಾರಿ ಮಹಿಳೆಯ ಗುರುತು ಪತ್ತೆ

Pinterest LinkedIn Tumblr


ನವದೆಹಲಿ: ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ನಡೆದ ಹಿಂಸಾಚಾರದ ವಿಡಿಯೋದಲ್ಲಿದ್ದ ಮುಸುಕುದಾರಿ ಮಹಿಳೆಯನ್ನು ವಿಶೇಷ ತನಿಖಾ ತಂಡವೊಂದು ಗುರುತಿಸಿದೆ. ವಿಚಾರಣೆ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಆಕೆಗೆ ನೋಟಿಸ್ ಕಳುಹಿಸಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಜನವರಿ 5 ರಂದು ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಏಳಕ್ಕೂ ಹೆಚ್ಚು ಮಂದಿಯನ್ನು ಎಸ್ ಐಟಿ ಗುರುತಿಸಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಇದಕ್ಕೂ ಮುಂಚೆ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶ್ ಘೋಷ್ ಸೇರಿದಂತೆ 9 ಮಂದಿ ಶಂಕಿತರ ಭಾವಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು.

ಜನವರಿ 5 ರಂದು ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿನ ಸಬರಮತಿ ಹಾಸ್ಟೆಲ್ ಗೆ ನುಗಿದ್ದ ಮುಸುಕುದಾರಿ ದುಷ್ಕರ್ಮಿಗಳು, ಹಾಸ್ಟೆಲ್ ಧ್ವಂಸ ಮಾಡಿ ಸುಮಾರು 30 ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರು.

Comments are closed.