ರಾಷ್ಟ್ರೀಯ

ಯುಪಿನಲ್ಲಿ ಮುಸ್ಲಿಮೇತರ ಅಕ್ರಮ ವಲಸಿಗರ ಪತ್ತೆ; ಸಿಎಎ ಪ್ರಕ್ರಿಯೆ ಅನುಷ್ಠಾನ

Pinterest LinkedIn Tumblr


ಲಖನೌ: ಪೌರತ್ವ ತಿದ್ದುಪಡಿ ಕಾಯಿದೆಯ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಗೆ ಪಾತ್ರವಾಗಿರುವ ಉತ್ತರ ಪ್ರದೇಶ ರಾಜ್ಯದ 19 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಮುಸ್ಲಿಮೇತರ ನಿರಾಶ್ರಿತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದೆ. ರಾಜ್ಯದಲ್ಲಿಸುಮಾರು 40 ಸಾವಿರ ಅಕ್ರಮ ಮುಸ್ಲಿಮೇತರ ವಲಸಿಗರು ವಾಸಿಸುತ್ತಿದ್ದು, ಈ ಪೈಕಿ ಪಿಲಿಭಿತ್‌ ಜಿಲ್ಲೆಯೊಂದರಲ್ಲಿಯೇ ಸುಮಾರು 35 ಸಾವಿರ ವಲಸಿಗರಿದ್ದಾರೆಂದು ವರದಿಗಳು ತಿಳಿಸಿವೆ.

ಸಿಎಂ ಯೋಗಿ ಆದಿತ್ಯನಾಥ್‌ ಸರಕಾರ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರ ವೈಯಕ್ತಿಕ ವಿವರಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದೆ. ಕೆಲವು ನಿರಾಶ್ರಿತ ಕುಟುಂಬಗಳು ಹೇಳಿದ ಕಥೆಗಳು ಈ ತ್ರಿವಳಿ ದೇಶಗಳಲ್ಲಿಮುಸ್ಲಿಮೇತರರು ಅನುಭವಿಸುತ್ತಿರುವ ಧಾರ್ಮಿಕ ದೌರ್ಜನ್ಯದ ಕರಾಳತೆಯನ್ನು ಬಿಚ್ಚಿಟ್ಟಿದೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ 40,000 ಮುಸ್ಲಿಮೇತರ ಅಕ್ರಮ ವಲಸಿಗರು ವಾಸಿಸುತ್ತಿರುವುದು ಈಗ ಪತ್ತೆಯಾಗಿದೆ. ಇದರಲ್ಲಿ ಆಗ್ರಾ, ರಾಯ್‌ ಬರೇಲಿ, ಸಹಾರಣ್‌ಪುರ, ಗೋರಖ್‌ಪುರ, ಅಲಿಘಡ, ಮುಜಫ್ಫರ್‌ನಗರ, ಮಥುರಾ, ಪ್ರತಾಪ್‌ಗಢ, ವಾರಾಣಸಿ, ಅಮೇಠಿ ಸೇರಿ 19 ಜಿಲ್ಲೆಗಳ ಮಾಹಿತಿ ಇದೆ. ಪಿಲಿಭಿತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರು ವಾಸಿಸುತ್ತಿರುವುದು ದಾಖಲಾಗಿದೆ. ಇದೊಂದು ನಿರಂತರ ಪ್ರಕ್ರಿಯೆ. ಜಿಲ್ಲಾಡಳಿತಗಳು ನಡೆಸುವ ಸಮೀಕ್ಷೆಗಳನ್ನು ಆಧರಿಸಿ ಕ್ರಮೇಣ ಅಂಕಿ-ಅಂಶ ಪರಿಷ್ಕರಿಸಿ ಅಂತಿಮ ಪಟ್ಟಿಯನ್ನು ಕೇಂದ್ರಕ್ಕೆ ಪುನಃ ಕಳುಹಿಸಿಕೊಡಲಾಗುವುದು ಎಂದು ಸಚಿವ ಶ್ರೀಕಾಂತ್‌ ಶರ್ಮಾ ಹೇಳಿದರು.

ಸಿಎಎ ಪರ ಅಭಿಯಾನ: ಜ.15ರವರೆಗೆ ಬಿಜೆಪಿ ದೇಶಾದ್ಯಂತ ಸಿಎಎ ಪರ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಇದರ ಭಾಗವಾಗಿ ಸಿಎಂ ಯೋಗಿ ಆದಿತ್ಯನಾಥ್‌ ಅವರು ಇತ್ತೀಚೆಗೆ ಗೋರಖ್‌ಪುರದಲ್ಲಿಕಾಯಿದೆ ಕುರಿತ ಗೊಂದಲಗಳನ್ನು ನಿವಾರಿಸಿದ್ದರು. ಕಿರುಕುಳಕ್ಕೊಳಗಾದ ಜನರಿಗೆ ಆಶ್ರಯ ನೀಡುವ ಭಾರತದ ಸಂಪ್ರದಾಯದ ತಳಹದಿ ಕಾಯಿದೆಯಲ್ಲಿದೆ ಎಂದಿದ್ದರು.

40,000: ಮುಸ್ಲಿಮೇತರ ನಿರಾಶ್ರಿತರ ಗುರುತು

19: ಜಿಲ್ಲೆಗಳಲ್ಲಿಮೊದಲ ಹಂತದ ಸಮೀಕ್ಷೆ

35,000: ಪಿಲಿಭಿತ್‌ನಲ್ಲಿರುವ ಅಕ್ರಮ ವಲಸಿಗರು

Comments are closed.