ರಾಷ್ಟ್ರೀಯ

ನಿಗಧಿತ ಅವಧಿಗಿಂತ ಮೊದಲೇ ವಿಶ್ವಸಂಸ್ಥೆಗೆ ಬಾಕಿ ಹಣ ಪಾವತಿಸಿದ ಭಾರತ; 193 ಸದಸ್ಯ ದೇಶಗಳ ಪೈಕಿ ಪೂರ್ಣ ಹಣ ನೀಡಿದ 4ನೇ ದೇಶ

Pinterest LinkedIn Tumblr

ವಿಶ್ವಸಂಸ್ಥೆ: ವಿಶ್ವಸಂಸ್ಥೆಗೆ ನೀಡಬೇಕಾಗಿರುವ ವಾರ್ಷಿಕ ದೇಣಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿಸಿರುವುದಕ್ಕಾಗಿ ವಿಶ್ವಸಂಸ್ಥೆಯು ಭಾರತಕ್ಕೆ ಧನ್ಯವಾದ ಸಲ್ಲಿಸಿದೆ. 193 ಸದಸ್ಯ ದೇಶಗಳನ್ನು ಒಳಗೊಂಡಿರುವ ವಿಶ್ವಸಂಸ್ಥೆಗೆ ಸರಿಯಾದ ಸಮಯದಲ್ಲಿ ಪೂರ್ಣ ದೇಣಿಗೆಯನ್ನು ಪಾವತಿಸಿರುವ ನಾಲ್ಕನೇ ದೇಶ ಭಾರತವಾಗಿದೆ.

ಭಾರತ ಶುಕ್ರವಾರ ವಿಶ್ವಸಂಸ್ಥೆಗೆ 2,33,96,496 ಡಾಲರ್ (ಸುಮಾರು 166 ಕೋಟಿ ರೂಪಾಯಿ) ಪಾವತಿಸಿದೆ. ಸದಸ್ಯ ದೇಶಗಳು ಸಂಪೂರ್ಣ ದೇಣಿಗೆಯನ್ನು 2020 ಫೆಬ್ರವರಿ 1ರೊಳಗೆ ಪಾವತಿಸಬೇಕಾಗಿದೆ.

‘‘ಇಂದು ನಾಲ್ಕನೇ ದೇಶವು ತನ್ನ ಪೂರ್ಣ ದೇಣಿಗೆಯನ್ನು ಪಾವತಿಸಿದೆ. ಈಗಾಗಲೇ ಪಾವತಿಸಿರುವ ಆರ್ಮೇನಿಯ, ಪೋರ್ಚುಗಲ್ ಮತ್ತು ಯುಕ್ರೇನ್‌ಗೆ ಇನ್ನೊಮ್ಮೆ ಧನ್ಯವಾದ ಸಲ್ಲಿಸುತ್ತೇವೆ ಹಾಗೂ ಹೊಸದಾಗಿ ದೇಣಿಗೆ ಪಾವತಿಸಿರುವ ಭಾರತಕ್ಕೂ ಧನ್ಯವಾದಗಳು’’ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ರ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದರು.

ವಿಶ್ವಸಂಸ್ಥೆಯ ಮಹಾಸಭೆಯು ಕಳೆದ ತಿಂಗಳು 2020ರ ವರ್ಷಕ್ಕಾಗಿ ವಿಶ್ವಸಂಸ್ಥೆಗೆ 3 ಬಿಲಿಯ ಡಾಲರ್ (ಸುಮಾರು 21,300 ಕೋಟಿ ರೂಪಾಯಿ)ಗಳ ಬಜೆಟ್ ಅಂಗೀಕರಿಸಿದೆ.

Comments are closed.