ಕರಾವಳಿ

ಮಂಗಳೂರು : ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪರಿಚಯ

Pinterest LinkedIn Tumblr

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಅಯ್ಕೆಯಾದ ಸುದರ್ಶನ್ ಮೂಡುಬಿದಿರೆ ಇವರ ಕಿರುಪರಿಚಯ ಇಲ್ಲಿದೆ.

44ರ ಹರೆಯದ ಸುದರ್ಶನ್ ಅವರು ಬಿಕಾಂ ಪದವೀಧರ. ಮೂಡುಬಿದಿರೆಯ ಧವಳಾ ಕಾಲೇಜಿನ ಹಳೇ ವಿದ್ಯಾರ್ಥಿ. ಬಜರಂಗದಳದ ತಾಲೂಕು ಸಂಚಾಲಕ, ಜಿಲ್ಲಾ ಸಂಚಾಲಕ, ಹಾಗೂ ವಿಶ್ವಹಿಂದು ಪರಿಷತ್‌ನ ಸೇವಾ ಪ್ರಮುಖ್ ಆಗಿ ಕಾರ್ಯ ನಿರ್ವಹಿಸಿದ ಅವರು ಬಳಿಕ ಬಿಜೆಪಿಲ್ಲಿ ಜವಾಬ್ದಾರಿ ನಿರ್ವಹಿಸಿದರು.

ಮೂಡುಬಿದಿರೆ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ, ದ.ಕ ಜಿಲ್ಲಾ ಬಿಜೆಪಿಯ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಅವರು ಕಳೆದ ಮೂರು ವರ್ಷದಿಂದ ದ.ಕ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

Comments are closed.