ರಾಷ್ಟ್ರೀಯ

ಕಿಲೋಗೆ 65 ರೂ.; 4 ತಾಸಿನಲ್ಲಿ 800 ಕೆಜಿ ಈರುಳ್ಳಿ ಮಾರಾಟ!

Pinterest LinkedIn Tumblr


ಚಂಡೀಗಢ್: ದೇಶದ ಹಲವೆಡೆ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದರೆ, ಮತ್ತೊಂದೆಡೆ ಚಂಡೀಗಢ ಮೂಲದ ಮಹಿಳಾ ಸಂಘಟನೆಯೊಂದು ಈರುಳ್ಳಿ ಕೆಜಿಗೆ 65 ರೂಪಾಯಿಗೆ ಮಾರಾಟ ಮಾಡಿದ್ದು, ಕೇವಲ ನಾಲ್ಕು ಗಂಟೆಯೊಳಗೆ 800 ಕೆಜಿ ಈರುಳ್ಳಿಯನ್ನು ಮಾರಾಟ ಮಾಡಿರುವುದಾಗಿ ವರದಿ ತಿಳಿಸಿದೆ.

ಜೀ ನ್ಯೂಸ್ ವರದಿ ಪ್ರಕಾರ, ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಂಡೀಗಢದ ನಾರಿ ಜಾಗೃತಿ ಮಂಚ್ ನ ಮಹಿಳಾ ಪಿಂಕ್ ಬ್ರಿಗೇಡ್ ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಮಾಡುವ ಕೆಲಸಕ್ಕೆ ಮುಂದಾಗಿರುವುದಾಗಿ ಹೇಳಿದೆ.

ಒಬ್ಬ ವ್ಯಕ್ತಿ ಎರಡು ಕಿಲೋ ಈರುಳ್ಳಿಯನ್ನು ಖರೀದಿಸಬಹುದಾಗಿದೆ. ಅಲ್ಲದೇ ಈರುಳ್ಳಿ ಖರೀದಿದಾರರು ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ಚೀಲವನ್ನು ತರಬೇಕು ಎಂದು ಸೂಚಿಸಿತ್ತು. ಸೆಕ್ಟರ್ 40ರ ಶ್ರೀ ಹನುಮಾನ್ ಧಾಮ್ ಮಂದಿರ ಸಮೀಪ 12 ಸ್ಟಾಲ್ ಗಳನ್ನು ತೆರೆದಿತ್ತು.

ತಾವು ನಾಸಿಕ್ ನಲ್ಲಿ ಒಂದು ಕಿಲೋ ಈರುಳ್ಳಿಗೆ 65 ರೂಪಾಯಿ ಬೆಲೆಯಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿದ್ದು, ಅದೇ ಬೆಲೆಗೆ ಯಾವುದೇ ಲಾಭ-ನಷ್ಟ ಇಲ್ಲದೇ ಮಾರಾಟ ಮಾಡಿರುವುದಾಗಿ ಮಹಿಳಾ ಸಂಘಟನೆಯ ಮುಖ್ಯಸ್ಥೆ ನೀನಾ ತಿವಾರಿ ತಿಳಿಸಿದ್ದಾರೆ.

Comments are closed.