ರಾಷ್ಟ್ರೀಯ

ಜಿಯೋ ಗ್ರಾಹಕರು ಹಳೆ ಪ್ಲ್ಯಾನ್ ಪಡೆಯಲು ಈ ಕೆಲಸ ಮಾಡಿ

Pinterest LinkedIn Tumblr


ನವೆದೆಹಲಿ:ಇತ್ತೀಚೆಗಷ್ಟೇ ರಿಲಯನ್ಸ್ ಮಾಲಿಕತ್ವದ ಟೆಲಿಕಾಂ ಕಂಪನಿ ಜಿಯೋ ತನ್ನ ಟ್ಯಾರಿಫ್ ಗಳಲ್ಲಿ ಬದಲಾವಣೆ ತಂದಿದೆ. ಆದರೆ, ಜಿಯೋನ ಹಳೆ ಪ್ರೀ ಪೇಡ್ ಪ್ಲ್ಯಾನ್ ಗೆ ರಿಚಾರ್ಜ್ ಮಾಡಲು ಸಂಸ್ಥೆ ಒಂದು ವಿಕಲ್ಪ ಕೂಡ ಮುಂದಿಟ್ಟಿದೆ. ಯಾವ ಜಿಯೋ ಬಳಕೆದಾರರ ನಂಬರ್ ಮೇಲೆ ಆಕ್ಟಿವ್ ಪ್ಲ್ಯಾನ್ ಲಭ್ಯವಿರುವುದಿಲ್ಲವೋ , ಅವರು ಜಿಯೋನ ಹಳೆ ಪ್ರೀಪೇಡ್ ಗೆ ರಿಚಾರ್ಜ್ ಮಾಡಿಸಬಹುದಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಜಿಯೋ ‘ಆಲ್ ಇನ್ ವನ್’ ಪ್ರೀಪೇಡ್ ಪ್ಲ್ಯಾನ್ ಘೋಷಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಘೋಷಣೆ ಮಾಡಿದ್ದ ಕಂಪನಿ ತನ್ನ ಹೊಸ ಯೋಜನೆಗಳು ಶೇ.300ರಷ್ಟು ಹೊಸ ಕೊಡುಗೆಗಳೊಂದಿಗೆ ಬರಲಿವೆ ಎಂದಿತ್ತು. ಆದರೆ, ಹಳೆ ಪ್ಲ್ಯಾನ್ ಗಳ ತುಲನೆಯಲ್ಲಿ ಹೊಸ ಪ್ಲ್ಯಾನ್ ಗಳು ಶೇ.40ರಷ್ಟು ದುಬಾರಿಯಾಗಿವೆ. ಸದ್ಯ ಗ್ರಾಹಕರು ತಮ್ಮ ಜಿಯೋ ಕನೆಕ್ಷನ್ ಮೂಲಕ ಟ್ಯಾರೀಫ್ ಪ್ರೊಟೆಕ್ಷನ್ ವೈಶಿಷ್ಟ್ಯದ ಲಾಭ ಪಡೆದು ಜಿಯೋ ನ ಹಳೆ ಪ್ಲ್ಯಾನ್ ಗೆ ರಿಚಾರ್ಚ್ ಮಾಡಿಸಬಹುದಾಗಿದೆ.

ಜಿಯೋನ ಹಳೆ ಪ್ಯಾನ್ ಪಡೆಯಲು ನೀವು ನಿಮ್ಮ ಜಿಯೋ ಅಕೌಂಟ್ ಗೆ ಲಾಗಿನ್ ಆಗಬೇಕು. ಇದಕ್ಕಾಗಿ ನೀವು ಜಿಯೋ.ಕಾಮ್ ಗೆ ಭೇಟಿ ನೀಡಬೇಕು. ಲಾಗಿನ್ ಆದ ಬಳಿಕ ಜಿಯೋ ನಂಬರ್ ಹೊಂದಿರುವ ಟೆಕ್ಸ್ಟ್ ಬಾಕ್ಸ್ ಪಕ್ಕದಲ್ಲಿರುವ ಸೆಟ್ಟಿಂಗ್ ಗುಂಡಿಯನ್ನೊಮ್ಮೆ ಕ್ಲಿಕ್ಕಿಸಬೇಕು. ಆ ಬಳಿಕ ವೆಬ್ ಸೈಟ್ ನ ಭಾಳಭಾಗದಲ್ಲಿ ನಿಮಗೆ ಟ್ಯಾರಿಫ್ ಪ್ರೊಟೆಕ್ಷನ್ ವಿಕಲ್ಪ ಇರುವುದನ್ನು ನೀವು ಕಾಣಬಹುದು. ಈ ಗುಂಡಿಯ ಮೇಲೆ ಕ್ಲಿಕ್ಕಿಸಿದಾಗ ನಿಮ್ಮ ಮುಂದೆ ಹಳೆ ಪ್ಲ್ಯಾನ್ ಗಳ ಪಟ್ಟಿ ಬರಲಿದೆ ಇಲ್ಲಿಂದ ನೀವು ನಿಮಗೆ ಬೇಕಾಗಿರುವ ಹಳೆ ಪ್ಲ್ಯಾನ್ ಖರೀದಿಸಬಹುದಾಗಿದೆ.

ಆದರೆ, ಕೇವಲ ಜಿಯೋ ನಂಬರ್ ಮೇಲೆ ಆಕ್ಟಿವ್ ಪ್ಲ್ಯಾನ್ ಹೊಂದಿರದ ಗ್ರಾಹಕರಿಗೆ ಮಾತ್ರ ಈ ಟ್ಯಾರಿಫ್ ಪ್ರೊಟೆಕ್ಷನ್ ವಿಕಲ್ಪ ಲಭ್ಯವಿರುವುದು ಇಲ್ಲಿ ಗಮನಾರ್ಹವಾಗಿದೆ. ಇದರರ್ಥ ಒಂದು ವೇಳೆ ನಿಮ್ಮ ನಂಬರ್ ಮೇಲೆ ಯಾವುದೇ ಪ್ಲ್ಯಾನ್ ಆಕ್ಟಿವ್ ಆಗಿದ್ದರೆ, ನಿಮಗೆ ಹಳೆ ಟ್ಯಾರಿಫ್ ಪ್ಲ್ಯಾನ್ ವಿಕಲ್ಪ ಸಿಗುವುದಿಲ್ಲ.

TRAIನ ಟ್ಯಾರಿಫ್ ಪ್ರೊಟೆಕ್ಷನ್ ಕಂಪ್ಲಾಯ್ಸಸ್ ಕಾರಣ ಈ ಸೌಲಭ್ಯ ಗ್ರಾಹಕರಿಗೆ ಲಭ್ಯವಿರಲಿದೆ. ಇದರಡಿ ಟೆಲಿಕಾಂ ಕಂಪನಿಗಳು 6 ತಿಂಗಳ ಅವಧಿಗಾಗಿ ಹಳೆ ಟ್ಯಾರಿಫ್ ಪ್ಲ್ಯಾನ್ ಇಡುವುದು ಅನಿವಾರ್ಯವಾಗಿದೆ. ಇತರೆ ಟೆಲಿಕಾಂ ಕಂಪನಿಗಳೂ ಕೂಡ TRAIನ ಟ್ಯಾರಿಫ್ ಪ್ರೊಟೆಕ್ಷನ್ ನಿಯಮಗಳನ್ನು ಪಾಲಿಸುತ್ತವೆ. ಆದರೆ, ಅವುಗಳ ಪ್ಲ್ಯಾನ್ ಗಳನ್ನು ಎಕ್ಸ್ಪ್ರೆಸ್ ರೀತಿಯಲ್ಲಿ ಪಡಿಯುವುದು ಜಿಯೋ ನಷ್ಟು ಸುಲಭದ ಮಾತಲ್ಲ.

Comments are closed.