
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾದ ಫಸ್ಟ್ ಲುಕ್ ಇಂದು ಅನಾವರಣಗೊಂಡಿದೆ.
ಈ ಬಗ್ಗೆ ಚಿತ್ರತಂಡ ಮೊದಲೇ ಸುಳಿವು ನೀಡಿತ್ತು. ಹಾಗಾಗಿ ಅಭಿಮಾನಿಗಳು ಸಿನಿಮಾದ ಫಸ್ಟ್ ಲುಕ್ ನೋಡಲು ತುದಿಗಾಲಲ್ಲಿ ನಿಂತಿದ್ದರು. ಕೆಜಿಎಫ್ ಮೊದಲ ಭಾಗ ಬಿಡುಗಡೆಗೊಂಡು ಇಂದಿಗೆ ಒಂದು ವರ್ಷ ಆಯ್ತು. ಈ ಹಿನ್ನೆಲೆಯಲ್ಲಿಯೇ ಚಿತ್ರತಂಡ ಚಾಪ್ಟರ್-2 ನ ಮೊದಲ ಚಿತ್ರವನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಹಿಂದೆ ಸಂಜಯ್ ದತ್ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಅಧೀರನ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಮುನ್ನಾಭಾಯ್ ಬರ್ತ್ ಡೇ ವಿಶ್ ಮಾಡಿತ್ತು. ಗರುಡನ ಸಂಹಾರದ ಬಳಿಕ ರಾಕಿ ಹೇಗೆ ತನ್ನ ಕೋಟೆಯನ್ನ ಕಟ್ಟುತ್ತಾನೆ, ಬಂಧನದಲ್ಲಿದ್ದ ಎಷ್ಟೋ ಕಾರ್ಮಿಕರನ್ನು ತನ್ನ ಹೇಗೆ ಕಾಪಾಡುತ್ತಾನೆ? ಎಂಬುವುದು ಎರಡನೇ ಭಾಗದಲ್ಲಿ ನೋಡಬಹುದು. ನೂರಾರು ಧ್ವನಿಗಳಿಗೆ ಶಕ್ತಿ ನೀಡಿದ ರಾಕಿ ಭಾಯ್ ಸಾಮ್ರಾಜ್ಯ ಸ್ಥಾಪನೆಯನ್ನು ಫಸ್ಟ್ ಲುಕ್ ತೋರಿಸುತ್ತದೆ.
Comments are closed.