
ನಾಗ್ಪುರ : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 2 ಲಕ್ಷ ರೂ. ವರೆಗಿನ ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಶನಿವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು.
ಈ ವರ್ಷದ ಸೆಪ್ಟೆಂಬರ್ 30 ರವರೆಗೆ ತೆಗೆದುಕೊಂಡ ರೈತರ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು. ಈ ಮೊತ್ತದ ಮೇಲಿನ ಸೀಲಿಂಗ್ ಎರಡು ಲಕ್ಷ ರೂ. ಈ ಯೋಜನೆಯನ್ನು ಮಹಾತ್ಮ ಜ್ಯೋತಿರಾವ್ ಫುಲೆ ಎನ್ನುವ ಈ ಯೋಜನೆಯನ್ನು ಬಿಜೆಪಿಯೊಂದಿಗಿನ ಸುದೀರ್ಘ ಚರ್ಚೆಯ ನಂತರ ಈ ಘೋಷಣೆಯನ್ನು ಮಹಾರಾಷ್ಟ್ರ ಸಿಎಂ ಹೇಳಿದರು.
ಕಳೆದ ತಿಂಗಳು ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಸೇರಿ ಮೈತ್ರಿಯಿಂದ ಅಧಿಕಾರಕ್ಕೆ ಬಂದ ನಂತರ, ನಡೆದ ಮೊದಲ ವಿಧಾನಸಭಾ ಅಧಿವೇಶನದ ಕೊನೆಯ ದಿನದಂದು ಈ ಪ್ರಕಟಣೆಯನ್ನು ಹೊರಡಿಸಿದೆ.
ಸೆಪ್ಟೆಂಬರ್ 30, 2019 ರವರೆಗೆ ಬಾಕಿ ಇರುವ ಬೆಳೆ ಸಾಲಗಳನ್ನು ನನ್ನ ಸರ್ಕಾರವು ಮನ್ನಾ ಮಾಡಲಾಗುವುದು ಎಂದಿದ್ದು, ಅಲ್ಲದೇ, ಮತ್ತೊಂದು ಯೋಜನೆಯನ್ನು ಸೇರಿಸುವುದರಿಂದ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ರೈತರಿಗೆ ಸಹಾಯವಾಗುತ್ತದೆ. ಜನರಿಂದ ದೂರುಗಳನ್ನು ಕೇಳಲು ಮತ್ತು ಪ್ರತಿ ಸಣ್ಣ ಕೆಲಸಗಳಿಗಾಗಿ ಮುಂಬೈಗೆ ದೂರದ ಪ್ರಯಾಣದಿಂದ ದೂರವಿರಲು ಮುಖ್ಯಮಂತ್ರಿ ಕಚೇರಿಯ ಸಣ್ಣ ಘಟಕವನ್ನು ಪ್ರತಿ ಜಿಲ್ಲೆಯಲ್ಲೂ ಸ್ಥಾಪಿಸಲಾಗುವುದು ಎಂದು ಅವರು ಇದೇ ವೇಳೆಯಲ್ಲಿ ತಿಳಿಸಿದರು.
ಇದೇ ವೇಳೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೃಷಿ ಸಾಲ ಮನ್ನಾ ಮಾಡುವ ಘೋಷಣೆಯ ನಂತರ, ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಮಹಾರಾಷ್ಟ್ರ ವಿಧಾನಸಭೆಯಿಂದ ಹೊರನಡೆದವು.
Comments are closed.