
ಭೋಪಾಲ್: ಮೂರು ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿ ಅವುಗಳನ್ನು ಎರಡು ಮರಿಯನ್ನು ತಿಂದು ಹಾಕಿರುವ ಘಟನೆ ಇಂದೋರ್ ಮೃಗಾಲಯದಲ್ಲಿ ನಡೆದಿದೆ. ಸಜಾತಿ ಪ್ರಾಣಿಗಳನ್ನು ಭಕ್ಷಿಸುವ ಅಪರೂಪದ ಪ್ರಕರಣ ಇದಾಗಿದೆ.
ಈ ಘಟನೆ ಮೂರ್ನಾಲ್ಕು ದಿನಗಳ ಹಿಂದೆಯೇ ನಡೆದಿದೆ, ಆದರೆ, ಸೋಮವಾರ ಬೆಳಕಿಗೆ ಬಂದಿದೆ ಎಂದು ಕಮಲ ನೆಹರು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.
ಬಿಜಲಿ ಹೆಸರಿನ ಸಿಂಹಿಣಿ 15 ದಿನಗಳ ಹಿಂದೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಮತ್ತು ಅವೆಲ್ಲವನ್ನೂ ಒಟ್ಟಿಗೆ ಇರಿಸಲಾಗಿತ್ತು. ಆದರೆ, ಎರಡು ಮರಿಗಳು ಕಾಣೆಯಾಗಿರುವುದು ಸೋಮವಾರ ಮೃಗಾಲಯದ ಸಿಬ್ಬಂದಿ ಗಮನಕ್ಕೆ ಬಂದಿದೆ. ಬಳಿಕ ಸಿಂಹಿಣಿ ತನ್ನ ಸ್ವಂತ ಮರಿಗಳನ್ನೇ ತಿಂದು ಹಾಕಿರುವ ವಾಸ್ತವ ಗೊತ್ತಾಗಿದೆ.
ಈ ಘಟನೆ ಎರಡು ಮೂರು ದಿನಗಳಿಂದ ಯಾರ ಗಮನಕ್ಕೂ ಬಂದಿಲ್ಲ. ಮರಿಗಳೊಂದಿಗೆ ಸಿಂಹಿಣಿಯೂ ಜೊತೆಗಿತ್ತು. ಹಾಗೂ ಅವುಗಳನ್ನು ಬಿಡಲಾಗಿದ್ದ ಜಾಗದಲ್ಲಿ ಸಿಸಿಟಿವಿ ವಿಚಕ್ಷಣೆಯನ್ನು ಅಳವಡಿಸಿಲ್ಲ.
ಮೃಗಾಲಯದ ಉಸ್ತುವಾರಿ ಡಾ.ಉತ್ತಮ್ ಯಾದವ್ ಮಾತನಾಡಿ, ಸ್ವಜಾತಿ ಭಕ್ಷಣೆ ತೀರಾ ಅಪರೂಪದ ಪ್ರಕರಣವಾಗಿದೆ. ಇದು ಸಂಪೂರ್ಣವಾಗಿ ಅಸಾಮಾನ್ಯವಲ್ಲ. ಸಾಕುಪ್ರಾಣಿಗಳಾದ ಬೆಕ್ಕು ಮತ್ತು ನಾಯಿಗಳಲ್ಲಿ ಇಂತಹ ನಿದರ್ಶನಗಳಿವೆ. ಹುಲಿ ಮರಿಗಳಿಗೆ ಜನ್ಮ ನೀಡಿದ ಬಳಿಕ ತುಂಬಾ ಕೋಪೊದ್ರಿಕ್ತವಾಗಿರುತ್ತವೆ. ಮತ್ತು ಆ ಮರಿಗಳು ತಾಯಿಯಿಂದಲೇ ಹತ್ಯೆಗೆ ಗುರಿಯಾಗುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ ಅಥವಾ ಅನಾರೋಗ್ಯದಿಂದ ಸಾವಿಗೀಡಾಗುತ್ತವೆಯೋ ಗೊತ್ತಿಲ್ಲ. ಮೂರನೇ ಮರಿ ಸುರಕ್ಷಿತವಾಗಿದ್ದು, ಅದನ್ನು ಉತ್ತಮವಾಗಿ ಆರೈಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
Comments are closed.