ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಮಸೂದೆ ಕುರಿತು ರಾಹುಲ್ ಗಾಂಧಿ ಹೇಳಿದ್ದೇನು…?

Pinterest LinkedIn Tumblr

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಪೌರತ್ವ ತಿದ್ದುಪಡಿ ಮಸೂದೆಗೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಇದರ ವಿರುದ್ಧ ಈಗಾಗಲೇ ಈಶಾನ್ಯ ರಾಜ್ಯಗಳ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.

ಇನ್ನು ಈ ಕುರಿತು ಮಾತನಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಈ ಮಸೂದೆಯಿಂದ ಭಾರತದ ಅಡಿಪಾಯಕ್ಕೆ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ಭಾರತದ ಸಂವಿಧಾನದ ಮೇಲೆ ದಾಳಿ ನಡೆಸಲಿದೆ, ಯಾರಾದರೂ ಇದನ್ನು ಬೆಂಬಲಿಸಿದರೆ, ನಮ್ಮ ದೇಶದ ಅಡಿಪಾಯ ನಾಶ ಮಾಡಿದಂತೆ ಎಂದು ಅವರು ಟ್ವೀಟ್​ ಮೂಲಕ ಟೀಕಿಸಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ವಲಸೆ ಬಂದಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದು ಈ ತಿದ್ದುಪಡಿ ಮಸೂದೆಯ ಉದ್ದಿಶ್ಯವಾಗಿದೆ. 1971ರಲ್ಲಿ ಬಾಂಗ್ಲಾದೇಶ ಸೃಷ್ಟಿಯಾದಾಗ, ಉಗಾಂಡ ದೇಶದಲ್ಲಿ ಭಾರತೀಯರ ಮೇಲೆ ದಾಳಿಗಳಾದಾಗ, ಹೀಗೆ ಹಲವು ಸಂದರ್ಭಗಳಲ್ಲಿ ಸೂಕ್ತ ಕಾರಣಗಳ ಮೂಲಕ ಜನರಿಗೆ ಪೌರತ್ವ ನೀಡಿದ ಉದಾಹರಣೆಗಳುಂಟು ಎಂದು ಈ ಮಸೂದೆಯನ್ನು ಅಮಿತ್​ ಶಾ ಸಮರ್ಥಿಸಿಕೊಂಡಿದ್ದಾರೆ.

ಲೋಕಸಭೆಯಲ್ಲಿ ಅಂಗೀಕೃತವಾಗಿದ್ದ, ಈ ಮಸೂದೆಯನ್ನು ನಾಳೆ ರಾಜ್ಯಸಭೆಯಲ್ಲಿ ಮಂಡಿಸಲಾಗುವುದು.

ಈ ಮಸೂದೆ ಅಗೋಚರ ವಿಭಜನೆ ಎಂದು ಸಾಮ್ನಾ ಟೀಕಿಸಿದ ಶಿವಸೇನೆ ಲೋಕಸಭೆಯಲ್ಲಿ ಈ ಮಸೂದೆ ಪರವಾಗಿ ಮತಚಲಾಯಿಸಿದೆ.

Comments are closed.