ರಾಷ್ಟ್ರೀಯ

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅತಿಕ್ರಮಣಕಾರರು’!

Pinterest LinkedIn Tumblr


ನವದೆಹಲಿ: ದೇಶದ ಭದ್ರತೆ ವಿಚಾರವಾಗಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಎನ್ ಆರ್ ಸಿಯನ್ನು ವಿರೋಧಿಸುವ ಭರದಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಮೋದಿ ಹಾಗೂ ಅಮಿತ್ ಶಾ ಒಳನುಸುಳುಕೋರರು ಎಂದು ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಮೂಲತಃ ಗುಜರಾತ್ ನವರು ಆದರೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಭಾರತ ಎಲ್ಲರಿಗೂ ಸೇರಿದೆ. ಇದೇನು ಖಾಸಗಿ ಆಸ್ತಿಯೇನು? ಇಲ್ಲಿರುವ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ, ಮಿಸ್ಟರ್ ಮೋದಿ, ಮಿಸ್ಟರ್ ಅಮಿತ್ ಶಾ, ನೀವೇ ಒಳನುಸುಳುಕೋರರು, ಅತಿಕ್ರಮಣಕಾರರು, ನಿಮ್ಮ ಮನೆ ಇರೋದು ಗುಜರಾತ್ ನಲ್ಲಿ ದೆಹಲಿಗೆ ಬಂದಿದ್ದೀರ ನೀವೂ ಸಹ ವಲಸಿಗರೇ… ಎಂದು ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ದೇಶಾದ್ಯಂತ ಎನ್ ಆರ್ ಸಿಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದು, ಎನ್ ಆರ್ ಸಿ ಜಾರಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಈ ಹೇಳಿಕೆ ಮೂಲಕ ಮತ್ತೊಮ್ಮೆ ತೀವ್ರ ಟೀಕೆಗೆ ಗುರಿಯಾಗಿದೆ.

Comments are closed.