ರಾಷ್ಟ್ರೀಯ

ಪಶು ವೈದ್ಯೆ ಮೃತಪಟ್ಟ ನಂತರವೂ ಅತ್ಯಾಚಾರ!

Pinterest LinkedIn Tumblr


ಹೈದರಾಬಾದ್: ಹೈದರಾಬಾದ್ ನ ಪಶು ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಬೆಚ್ಚಿ ಬೀಳಿಸುವ ಮಾಹಿತಿಗಳು ಬಹಿರಂಗವಾಗುತ್ತಿವೆ.

ಕೋರ್ಟ್ ಗೆ ಸಲ್ಲಿಸಲಾಗಿರುವ ರಿಮ್ಯಾಂಡ್ ರಿಪೋರ್ಟ್ ನ ಪ್ರಕಾರ, ಪಶು ವೈದ್ಯೆ ಮೃತಪಟ್ಟ ನಂತರವೂ ಆಕೆಯ ಮೇಲೆ ಲಾರಿ ಕ್ಯಾಬಿನ್ ನಲ್ಲಿ ನಾಲ್ವರು ಕಾಮಪಿಪಾಸುಗಳು ಅತ್ಯಾಚಾರವೆಸಗಿದ್ದಾರೆ.

ಮೊಹಮ್ಮದ್ ಅಲಿಯಾಸ್ ಅರೀಫ್, ಜೊಲ್ಲು ಶಿವ, ಜೊಲ್ಲು ನವೀನ್ ಹಾಗೂ ಚೆನ್ನಕೇಶವುಲು ಸತತ 1 ಗಂಟೆಗಳ ಕಾಲ ಆಕೆಯನ್ನು ಕಾಡಿದ್ದು, ಬಯಲಿಗೆಳೆದುಕೊಂಡು ಹೋಗಿ, ಆಕೆಗೆ ಬಲವಂತವಾಗಿ ತಂಪುಪಾನಿಯದ ಜೊತೆ ವಿಸ್ಕಿ ಬೆರೆಸಿ ಕುಡಿಸಿದ್ದಾರೆ. ನಂತರ ತಲೆಗೆ ಹೊಡೆದಿದ್ದು, ಅತ್ಯಾಚಾರವೆಸಗಿ ಸಾಯಿಸಿದ್ದಾರೆ.

ಆಕೆಯನ್ನು ಹತ್ಯೆ ಮಾಡಿದ ನಂತರ ಲಾರಿ ಕ್ಯಾಬಿನ್ ಗೆ ಹಾಕಿ, ಆಕೆ ಮೃತಪಟ್ಟ ನಂತರವೂ ಸರಣಿ ಅತ್ಯಾಚಾರವೆಸಗಿದ್ದಾರೆ. ನಂತರ ಲಾರಿಯಲ್ಲಿ ಮುಂದೆ ಸಾಗಲು ನಿರ್ಧರಿಸಿದ್ದಾರೆ. ಆದರೆ ಈ ಆರೋಪಿಯ ಪೈಕಿ ಓರ್ವ ಆಕೆಯ ಬಟ್ಟೆಗಳನ್ನಿಟ್ಟುಕೊಂಡು ಕೆಳಗಿಳಿದು ವಾಪಸ್ಸಾಗಿದ್ದಾನೆ.

ಉಳಿದವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾದ್ ನಗರ್ ವರೆಗೂ ತೆರಳಿ ಮೃತದೇಹವನ್ನು ಎಸೆಯುವುದಕ್ಕೆ ಕತ್ತಲ ಪ್ರದೇಶವನ್ನು ಹುಡುಕಿದ್ದಾರೆ. ಶಾದ್ ನಗರದ ಚತನ್ಪಲ್ಲಿಯಲ್ಲಿ ಆಕೆಯ ಮೃತದೇಹವನ್ನು ಬ್ಲಾಂಕೆಟ್ ನಲ್ಲಿಟ್ಟು ಆಕೆಯ ಗುರುತು ಸಿಗಬಾರದೆಂಬ ಕಾರಣಕ್ಕಾಗಿ ಬೆಂಕಿ ಹಚ್ಚಿ ಸಾಯಿಸಿದ್ದಾರೆ.

Comments are closed.