ರಾಷ್ಟ್ರೀಯ

ಭಾರತದ ಜಿಡಿಪಿಯು 4.5 ಶೇಕಡಕ್ಕೆ ಕುಸಿತ

Pinterest LinkedIn Tumblr

ಹೊಸದಿಲ್ಲಿ : ಈ ವರ್ಷದ ದ್ವಿತೀಯ ತ್ರೈಮಾಸಿಕ (ಜುಲೈ-ಸೆಪ್ಟಂಬರ್) ಅವಧಿಯಲ್ಲಿ ಭಾರತದ ಜಿಡಿಪಿಯು 4.5 ಶೇಕಡಕ್ಕೆ ಕುಸಿದಿದೆ ಎಂದು ಸರಕಾರ ಇಂದು ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತಿಳಿಸಿವೆ.

ಆರು ವರ್ಷಗಳಲ್ಲೇ ಇದು ಅತ್ಯಂತ ಹಿನ್ನಡೆಯಾಗಿದ್ದು, 2013ರಲ್ಲಿ ಜಿಡಿಪಿ 4.3 ಶೇಕಡಕ್ಕೆ ಕುಸಿದಿತ್ತು.

ಹಿಂದಿನ ತ್ರೈಮಾಸಿಕದಲ್ಲಿ ಜಿಡಿಪಿ 5 ಶೇ. ಮತ್ತು 2018ರ ಜುಲೈ-ಸೆಪ್ಟಂಬರ್ ಅವಧಿಯಲ್ಲಿ 7 ಶೇ.ದಷ್ಟಿತ್ತು. ಆರ್ಥಿಕ ತಜ್ಞರ ನಿರೀಕ್ಷೆಗಿಂತಲೂ ಜಿಡಿಪಿ ದರ ಕುಸಿದಿದೆ. ಈ ಹಿಂದೆ ರಾಯ್ಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ಅವಧಿಯಲ್ಲಿ ಜಿಡಿಪಿ ದರ 4.7 ಶೇಕಡಷ್ಟಿರಲಿದೆ ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದರು.

Comments are closed.