ರಾಷ್ಟ್ರೀಯ

2.9 ಶೇ.ದಷ್ಟಿದ್ದ ಗ್ರಾಮೀಣ ನಿರುದ್ಯೋಗ ಪ್ರಮಾಣ 2017-18ರಲ್ಲಿ ಎರಡು ಪಟ್ಟು ಹೆಚ್ಚಳ

Pinterest LinkedIn Tumblr

ಹೊಸದಿಲ್ಲಿ: 2013-14ರಲ್ಲಿ 2.9 ಶೇ.ದಷ್ಟಿದ್ದ ಗ್ರಾಮೀಣ ನಿರುದ್ಯೋಗ ಪ್ರಮಾಣ 2017-18ರಲ್ಲಿ ಎರಡು ಪಟ್ಟು ಹೆಚ್ಚಳಗೊಂಡಿದ್ದು, 5.3 ಶೇಕಡದಷ್ಟಾಗಿದೆ ಎಂದು ಕೇಂದ್ರ ಸರಕಾರವು ಸಂಸತ್ ಗೆ ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ನಿರುದ್ಯೋಗದಲ್ಲಿ 4.9 ಶೇ.ದಿಂದ 7.7ಶೇ.ದಷ್ಟು ಹೆಚ್ಚಳವಾಗಿದೆ. ನಗರ ಪ್ರದೇಶಗಳ ಪುರುಷರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಪ್ರತಿ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆಯೇ ಎನ್ನುವ ಕಾಂಗ್ರೆಸ್ ಸಂಸದ ಕುಮಾರ್ ಕೇಟ್ಕರ್ ರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಈ ಮಾಹಿತಿಗಳನ್ನು ನೀಡಿದರು.

Comments are closed.