ರಾಷ್ಟ್ರೀಯ

2020ರಿಂದ ಸಿಬಿಎಸ್‌ಇ ಪರೀಕ್ಷಾ ಶುಲ್ಕ ರೂ.1,500ಕ್ಕೆ ಏರಿಕೆ

Pinterest LinkedIn Tumblr

ನವದೆಹಲಿ : ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ)ಯು 10 ಮತ್ತು 12ನೇ ತರಗತಿಯ ಶುಲ್ಕವನ್ನು ಇದೀಗ ಪರಿಷ್ಕರಿಸಿದೆ. ಆದ್ರೇ 2019ನೇ ವರ್ಷಕ್ಕೆ ಅನ್ವಯವಾಗದೇ, 2020ರಿಂದ ದುಬಾರಿ ಪರೀಕ್ಷಾ ಶುಲ್ಕ ವಿಧಿಸಲಾಗುತ್ತದೆ ಎಂಬುದಾಗಿ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಸಮಯದಲ್ಲಿ ಉತ್ತರಿಸಿದ ಅವರು, ಸಿಬಿಎಸ್‌ಇ ವಿದ್ಯಾರ್ಥಿಗಳಾದಂತ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎನ್ನುವಂತ ನಿಯಮದ ಮೂಲಕ ಇದುವರೆಗೆ ಪರೀಕ್ಷಾ ಶುಲ್ಕವನ್ನು ಸಂಗ್ರಹಿಸಲಾಗುತ್ತಿತ್ತು. ಆದ್ರೇ ಇದೀಗ ಇಂತಹ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂಬುದಾಗಿ ಹೇಳಿದ್ದಾರೆ.

ಅಂದಹಾಗೇ ಇದುವರೆಗೆ 10 ಮತ್ತೆ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇಯು ಎಸ ಸಿ ಹಾಗೂ ಎಸ್ ಟಿ ವರ್ಗದ ವಿದ್ಯಾರ್ಥಿಗಳಿಗೆ ರೂ.50 ಪರೀಕ್ಷಾ ಶುಲ್ಕವನ್ನು ವಿಧಿಸಿತ್ತು. ಈ ಶುಲ್ಕ 2020ರಲ್ಲಿ ರೂ.1,200 ಆಗಲಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳೆ ರೂ.750 ವಿಧಿಸಲಾಗಿತ್ತು. ಇಂತಹ ಶುಲ್ಕವನ್ನು ರೂ.1,500ಕ್ಕೆ ಏರಿಕೆ ಮಾಡಲಾಗಿದೆ.

ವಿದೇಶದಲ್ಲಿ ಸಿಬಿಎಸ್‌ಇ ಶಾಲೆಗಳಲ್ಲಿ ಪರೀಕ್ಷೆಗೆ ಹೆಸರು ನೊಂದಾಯಿಸಿರುವ ವಿದ್ಯಾರ್ಥಿಗಳು, 10 ಮತ್ತು 12ನೇ ತರಗತಿಯ ಪರೀಕ್ಷೆಗಳ ಐದು ವಿಷಗಳಿಗೆ ಈ ಮೊದಲು ರೂ.5,000 ಪಾವತಿಸಬೇಕಾಗಿತ್ತು. ಇಂತಹ ಶುಲ್ಕವನ್ನು ರೂ.10,000ಕ್ಕೆ ಏರಿಕೆ ಮಾಡಲಾಗಿದೆ. ಇದಲ್ಲದೇ ಹೆಚ್ಚುವರಿ ವಿಷಯಗಳಿಗೆ ರೂ.1,000 ಇದ್ದಂತ ಶುಲ್ಕವನ್ನು ರೂ.2,000ಕ್ಕೆ ಏರಿಕೆ ಮಾಡಲಾಗಿದೆ.

ಇನ್ನೂ ಇದಲ್ಲದೇ ವಲಸೆ ಶುಲ್ಕವನ್ನು ಕೂಡ ಏರಿಕೆ ಮಾಡಲಾಗಿದ್ದು, ರೂ.150 ಇದ್ದಂತ ಈ ಶುಲ್ಕವನ್ನು ರೂ.350ಕ್ಕೆ ಏರಿಕೆ ಮಾಡಲಾಗಿದೆ. ಆದ್ರೇ ಅಂಧ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

Comments are closed.