ರಾಷ್ಟ್ರೀಯ

ತೆಲಂಗಾಣ​ ಶಾಸಕನ ಪೌರತ್ವ ರದ್ದು ಮಾಡಿದ ಕೇಂದ್ರ ಗೃಹ ಸಚಿವಾಲಯ

Pinterest LinkedIn Tumblr


ಹೈದರಾಬಾದ್: ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ 12 ತಿಂಗಳ ಅವಧಿಯಲ್ಲಿ ವಿದೇಶ ಭೇಟಿ ಬಗ್ಗೆ ಸತ್ಯವನ್ನು ಮರೆಮಾಚಿದ ಕಾರಣ ತೆಲಂಗಾಣದ ಟಿಆರ್​ಎಸ್​ ಶಾಸಕ ಚೆನ್ನಮನೇನಿ ರಮೇಶ್ ಅವರ ಪೌರತ್ವವನ್ನು ಕೇಂದ್ರ ಗೃಹ ಸಚಿವಾಲಯ ರದ್ದು ಮಾಡಿದೆ.

ತಪ್ಪು ಮಾಹಿತಿ/ ಸತ್ಯ ಮರೆಮಾಚುವ ಮೂಲಕ ಭಾರತಕ್ಕೆ ಸರ್ಕಾರಕ್ಕೆ ದಾರಿ ತಪ್ಪಿಸಿದ್ದರಿಂದ ಈ ಕ್ರಮದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅವರು ಭಾರತದಲ್ಲಿ ಇರಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಸಚಿವಾಲಯ ಅವರಿಗೆ ಪೌರತ್ವ ನೀಡಲು ಅನುಮತಿ ನೀಡಿಲ್ಲ ಎಂದು ಗೃಹ ಸಚಿವಾಲಯ ತನ್ನ ಆದೇಶದಲ್ಲಿ ಹೇಳಿದೆ.

ಚೆನ್ನಮನೆನಿ ರಮೇಶ್ ಅವರು ಭಾರತದ ಪ್ರಜೆಯಾಗಿ ಮುಂದುವರೆಯುವುದು ಸಾರ್ವಜನಿಕ ಹಿತಕ್ಕೆ ಉತ್ತಮವಲ್ಲ. ಆದ್ದರಿಂದ ಅವರ ದೇಶದ ನಾಗರಿಕತ್ವವನ್ನು ಜಪ್ತಿ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ರಮೇಶ್ ಅವರು ಈ ನಿರ್ಧಾರವನ್ನು ತೆಲಂಗಾಣ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿದ್ದಾರೆ. ನಾಗರಿಕ ಕಾಯ್ದೆಯಡಿ ತಮ್ಮ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಹೈಕೋರ್ಟ್​ ನಿರ್ದೇಶನವನ್ನು ಗೃಹ ಸಚಿವಾಲಯ ಕಡೆಗಣಿಸಿದೆ ಎಂದು ರಮೇಶ್ ಹೇಳಿದ್ದಾರೆ. ಟಿಆರ್​ಎಸ್​ ನಾಯಕನ ನಾಗರಿಕತ್ವವನ್ನು 2017ರಲ್ಲಿ ರದ್ದುಗೊಳಿಸಲಾಗಿತ್ತು. ರಮೇಶ್ ಜರ್ಮನ್ ನಾಗರಿಕ ಎಂದು ಆರೋಪ ಮಾಡಿತ್ತು.

Comments are closed.