ರಾಷ್ಟ್ರೀಯ

ಇಂದಿನಿಂದ ಭಕ್ತರಿಗೆ ಶಬರಿಮಲೆ ದರ್ಶನ ಭಾಗ್ಯ – ದೇವಸ್ಥಾನದ ಸುತ್ತ ಭಾರಿ ಭದ್ರತೆ

Pinterest LinkedIn Tumblr

ಪತ್ತನಂತಿಟ್ಟ: ಪ್ರವೇಶದ ಕುರಿತು ವಿವಾದದಿಂದ ಕೂಡಿದ ಕೇರಳದ ಶಬರಿಮಲೆ ದೇವಸ್ಥಾನ ಇಂದಿನಿಂದ ಭಕ್ತರ ದರ್ಶನಕ್ಕೆ ತೆರೆಯಲಿದೆ. ದೇವಸ್ಥಾನದ ಸುತ್ತ ಭಾರಿ ಭದ್ರತೆ ಒದಗಿಸಲಾಗಿದೆ.

ಅಹಿತಕರ ಘಟನೆಗಳು, ನಡೆಯದಂತೆ ಬೆಟ್ಟ ಮತ್ತು ದೇವಸ್ಥಾನದ ಸುತ್ತಮುತ್ತ ಸುಮಾರು ಹತ್ತು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಅಂತಿಮ ನಿರ್ಣಯ ನೀಡುವವರೆಗೂ ಶಬರಿ ಮಲೆಗೆ ಭೆಟಿ ನೀಡುವ ಮಹಿಳೆಯರಿಗೆ ರಕ್ಷಣೆ ನೀಡಲಾಗುವುದಲ್ಲ ಕೇರಳದ ಸಚಿವರು ಹೇಳಿಕೆ ನೀಡಿದ್ದಾರೆ.

ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು, ದೇವಸ್ಥಾನ ಪ್ರವೇಶಿಸಲು ಯತ್ನಿಸುವ ಮಹಿಳೆಯರಿಗೆ ಯಾವುದೇ ರಕ್ಷಣೆ ಒದಗಿಸಲಾಗುವುದಿಲ್ಲ ಎಂದಿದ್ದಾರೆ.

Comments are closed.