ರಾಷ್ಟ್ರೀಯ

ಬೆನಾಮಿ’ ವಹಿವಾಟುಗಳ ನಿಯಂತ್ರಣಕ್ಕೆ ಶೀಘ್ರದಲ್ಲಿ ಆಧಾರ್ ಅನ್ನು ಆಸ್ತಿಯೊಂದಿಗೆ ಜೋಡಣೆ

Pinterest LinkedIn Tumblr

ನವದೆಹಲಿ : ಆಧಾರ್ ಅನ್ನು ಆಸ್ತಿಯೊಂದಿಗೆ ಜೋಡಿಸುವ ಬಗ್ಗೆ ಶೀಘ್ರದಲ್ಲಿ ಆದೇಶವೊಂದು ಸದ್ಯದಲ್ಲೇ ಹೊರ ಬೀಳಲಿದೆ ಎನ್ನಲಾಗಿದೆ. 2014 ರಲ್ಲಿ ಮೋದಿ ಸರ್ಕಾರ ಅಧಿಕಾರ ಬಂದ ನಂತರ, ಕಪ್ಪು ಹಣದ ವಿರುದ್ದ ಸಮರ ಸಾರಿತ್ತು, ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಹೋಗಲಿದೆ ಎನ್ನಲಾಗಿದ್ದು, ಈಗ ಆಧಾರ್ ಅನ್ನು ಆಸ್ತಿಯೊಂದಿಗೆ ಜೋಡಿಸಲು ಸರ್ಕಾರವು ಕಾನೂನಿನೊಂದಿಗೆ ಹೊರಬರುವ ಅಂತಿಮ ಹಂತದಲ್ಲಿದೆ ಎಂಬ ವರದಿಗಳು ಬಂದಿವೆ.

ಈ ಕ್ರಮವು ಜಾರಿಯಾದಲ್ಲಿ ‘ಬೆನಾಮಿ’ ವಹಿವಾಟುಗಳನ್ನು ನಿಯಂತ್ರಣ ಮಾಡುವುದರಲ್ಲಿ ಸಹಾಯವಾಗುತ್ತದೆ ಎನ್ನಲಾಗಿದೆ. ಇನ್ನು ಇದಲ್ಲದೇ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ಆಸ್ತಿ ಬೆಲೆಯನ್ನು ಇಳಿಕೆ ಕಡಿಮೆಯಾಗುವುದರಲ್ಲಿ ಸಹಾಯವಾಗುತ್ತದೆ ಎನ್ನಲಾಗಿದೆ. ನಹಾರ್ ಗ್ರೂಪ್ ಮತ್ತು ಉಪಾಧ್ಯಕ್ಷ ನರೆಡ್ಕೊ (ಮಹಾರಾಷ್ಟ್ರ) ಉಪಾಧ್ಯಕ್ಷ ಮಂಜು ಯಾಗ್ನಿಕ್ ಅವರು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ಆಧಾರ್ ಸಂಖ್ಯೆಯನ್ನು ಆಸ್ತಿ ಮಾಲೀಕತ್ವಕ್ಕೆ ಜೋಡಿಸುವ ಪ್ರಸ್ತಾಪವು ವಸತಿ ಯೋಜನೆಗೆ ಸಹಕಾರಿಯಾಗಿದ್ದು, ಇದು ವಿಭಾಗಕ್ಕೆ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಳ ಮಾಡುತ್ತದೆ. ಮನೆ ಖರೀದಿದಾರರು ಅದರಿಂದ ಮತ್ತಷ್ಟು ಪ್ರಯೋಜನ ಪಡೆಯುತ್ತದೆ ಏಕೆಂದರೆ ಇದು ಅವರ ವಹಿವಾಟಿನಲ್ಲಿ ಸುರಕ್ಷತೆಯ ಪ್ರಜ್ಞೆಯನ್ನು ತರುತ್ತದೆ ಎನ್ನಲಾಗಿದೆ.

Comments are closed.