ರಾಷ್ಟ್ರೀಯ

ಅಯೋಧ್ಯಾ ತೀರ್ಪನ್ನು ಗೌರವಿಸುತ್ತೇವೆ; ಮೌಲಾನಾ ಮದನಿ

Pinterest LinkedIn Tumblr


ನವದೆಹಲಿ:ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಘೋಷಿಸಲು ದಿನಗಣನೆ ಆರಂಭವಾಗಿದೆ. ಮತ್ತೊಂದೆಡೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ನಾವು ಗೌರವಿಸಬೇಕು ಎಂದು ಜಮಿಯತ್ ಉಲೇಮಾ- ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೌಲಾನಾ, ಬಾಬ್ರಿ ಮಸೀದಿ ಕಾನೂನು ಮತ್ತು ನ್ಯಾಯದ ಪ್ರಕಾರ ಅದು ಮಸೀದಿಯೇ ಆಗಿದೆ ಎಂದರು.

ಕಳೆದ 400 ವರ್ಷಗಳಿಂದ ಅಯೋಧ್ಯಾದಲ್ಲಿ ಮಸೀದಿ ಇದೆ. ಅದು ಷರಿಯಾದ ಪ್ರಕಾರವೇ ಅದು ಮಸೀದಿಯಾಗಿದೆ. ಒಂದು ಬಾರಿ ಮಸೀದಿ ನಿರ್ಮಾಣವಾದ ಮೇಲೆ ಅದು ಎಂದೆಂದಿಗೂ ಮಸೀದಿಯೇ ಆಗಿರಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಆದರೆ ನಾವು ಸುಪ್ರೀಂಕೋರ್ಟ್ ಸಾಕ್ಷ್ಯಾಧಾರಗಳ ಮೇಲೆ ನೀಡುವ ತೀರ್ಪನ್ನು ಗೌರವಿಸಬೇಕು. ಅಷ್ಟೇ ಅಲ್ಲ ತೀರ್ಪಿನ ಹಿನ್ನೆಲೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ತಿಳಿಸಿದರು.

Comments are closed.