ರಾಷ್ಟ್ರೀಯ

ಸುತ್ತಿಗೆಯಿಂದ ತಲೆ ಒಡೆದು ಕೊಲೆ, ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ್ದ ಆರೋಪಿ!

Pinterest LinkedIn Tumblr


ಲಕ್ನೋ:ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ 25 ವರ್ಷದ ಯುವಕನ ಶವ ಪತ್ತೆಯಾಗಿದ್ದು, ಸುತ್ತಿಗೆಯಿಂದ ತಲೆಯನ್ನು ಒಡೆದು ಹಾಕಲಾಗಿದ್ದು, ಈ ಪೈಶಾಚಿ ಕೊಲೆ ಕೃತ್ಯವನ್ನು ಆರೋಪಿ ವಿಡಿಯೋ ರೆಕಾರ್ಡ್ ಮಾಡಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮುಜಾಫರ್ ನಗರ್ ಜಿಲ್ಲೆಯ ಛಾಪರ್ ಗ್ರಾಮದ ನಿವಾಸಿ ರಾಜೀವ್ ಅಕ್ಟೋಬರ್ 29ರಂದು ನಾಪತ್ತೆಯಾಗಿದ್ದ. ಗುರುವಾರ ಸಂಜೆ ಮೈದಾನ ಪ್ರದೇಶದಲ್ಲಿ ರಾಜೀವ್ ಶವ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸುತ್ತಿಗೆಯಿಂದ ತಲೆ ಮೇಲೆ ಹೊಡೆದು ಒಡೆದು ಹಾಕಲಾಗಿದ್ದು, ಈ ಕೃತ್ಯವನ್ನು ವಿಡಿಯೋ ಮಾಡಿದ್ದು, ಅದರ ನಾಲ್ಕು ವಿಡಿಯೋ ಕ್ಲಿಪ್ಸ್ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ. ಈ ಕೊಲೆ ಕೃತ್ಯದ ಹಿಂದಿರುವ ಒಬ್ಬ ಆರೋಪಿ ಆರ್ಯಾಕಾಂತ್ ಪರಾರಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಯಾವ ಕಾರಣಕ್ಕಾಗಿ ಕೊಲೆ ಕೃತ್ಯ ಎಸಗಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

Comments are closed.