ರಾಷ್ಟ್ರೀಯ

ಅ. 22ರಂದು ಬ್ಯಾಂಕ್ ಯೂನಿಯನ್ ಗಳು 24 ಗಂಟೆಗಳ ಬ್ಯಾಂಕ್ ಮುಷ್ಕರ ಘೋಷಣೆ

Pinterest LinkedIn Tumblr

ಹೊಸದಿಲ್ಲಿ: ಇತ್ತೀಚಿಗಿನ ಬ್ಯಾಂಕ್ ಗಳ ವಿಲೀನ ನಿರ್ಧಾರ, ಹೊರಗುತ್ತಿಗೆ ನೌಕರಿ ನಿರ್ಧಾರಗಳನ್ನು ವಿರೋಧಿಸಿ ಅಕ್ಟೋಬರ್ 22ರಂದು 2 ಬ್ಯಾಂಕ್ ಯೂನಿಯನ್ ಗಳು 24 ಗಂಟೆಗಳ ಬ್ಯಾಂಕ್ ಮುಷ್ಕರ ಘೋಷಿಸಿವೆ.

ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಶನ್ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್ ಐ) ಅಕ್ಟೋಬರ್ 22ರ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್ 23ರ ಬೆಳಗ್ಗೆ 6 ಗಂಟೆಯವರೆಗೆ ಮುಷ್ಕರ ಹಮ್ಮಿಕೊಂಡಿರುವುದಾಗಿ ಘೋಷಿಸಿವೆ.

ಬ್ಯಾಂಕಿಂಗ್ ಕ್ಷೇತ್ರಗಳ ಖಾಸಗೀಕರಣ ಮತ್ತು ಹೊರಗುತ್ತಿಗೆ ನೌಕರಿ ವಿರೋಧಿಸಿ ಈ ಮುಷ್ಕರಕ್ಕೆ ಮುಂದಾಗಿರುವುದಾಗಿ ಈ ಎರಡು ಸಂಘಟನೆಗಳು ತಿಳಿಸಿವೆ.

Comments are closed.