ರಾಷ್ಟ್ರೀಯ

ಥೈಲ್ಯಾಂಡ್ ನಲ್ಲಿ ಇಂಡಿಯಾ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ದುರ್ಮರಣ: ಮೃತದೇಹ ತರಲು ಪಾಲಕರ ಹರಸಾಹಸ

Pinterest LinkedIn Tumblr


ಭೋಪಾಲ್: ಮಧ್ಯಪ್ರದೇಶದ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಥೈಲ್ಯಾಂಡ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತದೇಹ ಸ್ವದೇಶಕ್ಕೆ ತರಲು ವಿದೇಶಾಂಗ ಸಚಿವಾಲಯ ಮತ್ತು ರಾಜ್ಯ ಸರ್ಕಾರ ನೆರವು ನೀಡಿದೆ.

ಪ್ರಗ್ಯಾ ಪಾಲಿವಾಲ್ (29) ಮೃತಪಟ್ಟ ಟೆಕ್ಕಿ. ಹಾಂಕಾಂಗ್ ಮೂಲದ ಸಂಸ್ಥೆಯೊಂದು ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಭಾಗಿಯಾಗಲು ಪಾಲಿವಾಲ್ ಫಕೆಟ್​ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಆದರೇ ಮೃತರ ಸಂಬಂಧಿಗಳಿಗೆ ಪಾಸ್ ಪೋರ್ಟ್ ಇಲ್ಲದ ಕಾರಣ ಮೃತದೇಹ ತರಲು ಸಾಧ್ಯವಾಗಿರಲಿಲ್ಲ.

ಈ ಹಿನ್ನಲೆಯಲ್ಲಿ ಮೃತಳ ಪಾಲಕರು ಸ್ಥಳೀಯ ಶಾಸಕರ ನೆರವನ್ನು ಕೋರಿದ್ದರು. ಆ ಬಳಿಕ ಶಾಸಕರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದರಿಂದ ವಿದೇಶಾಂಗ ಸಚಿವಾಲಯ ಮೃತದೇಹ ವಾಪಾಸು ತರುವ ಭರವಸೆ ನೀಡಿದೆ.

Comments are closed.