ರಾಷ್ಟ್ರೀಯ

Honey Trap Case: ಮಾಜಿ ಸಿಎಂಗೂ ಹೆಣ್ಣಿನ ಪೂರೈಕೆ

Pinterest LinkedIn Tumblr


ಭೂಪಾಲ್ (ಸೆ. 28): ಬಡ, ಮಧ್ಯಮವರ್ಗದವರಿಗೆ ಸಹಾಯ ಮಾಡಲೆಂದೇ ಹುಟ್ಟಿರುವಂತೆ ಮುಖವಾಡ ಹಾಕಿಕೊಳ್ಳುವ ಈ ಇಬ್ಬರು ಮಹಿಳೆಯರಿಗೆ ಕಾಲೇಜು ವಿದ್ಯಾರ್ಥಿನಿಯರೇ ಟಾರ್ಗೆಟ್. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತನ್ನು ಸಾಬೀತು ಮಾಡಿರುವ ಮಧ್ಯಪ್ರದೇಶದ ಇಬ್ಬರು ಮಹಿಳೆಯರು ಹೆಣೆದಿರುವ ಹನಿಟ್ರ್ಯಾಪ್​ ಜಾಲ ಸರ್ಕಾರದ ಅಧಿಕಾರಿಗಳು, ಸಚಿವರ ಕುತ್ತಿಗೆಗೆ ಬಂದು ಕುಳಿತಿದೆ. ಕಾಲೇಜು ವಿದ್ಯಾರ್ಥಿನಿಯರ ಜೊತೆ ಮಂಚವೇರಿದ್ದ ಅಧಿಕಾರಿಗಳು, ರಾಜಕಾರಣಿಗಳಿಗೆ ಈಗ ಚಡಪಡಿಕೆ ಶುರುವಾಗಿದೆ.

ಬಡ ಮಧ್ಯಮ ವರ್ಗದ ಸುಮಾರು 24 ಯುವತಿಯರನ್ನು ಮಧ್ಯಪ್ರದೇಶ ಸರ್ಕಾರದ ವಿಐಪಿಗಳ ಜೊತೆ ರಾತ್ರಿ ಕಳೆಯಲು ಬಲವಂತವಾಗಿ ಕಳುಹಿಸಲಾಗಿತ್ತು ಎಂದು ಮಧ್ಯಪ್ರದೇಶದ ಹನಿಟ್ರ್ಯಾಪ್​ ಹಗರಣದ ಪ್ರಮುಖ ಆರೋಪಿ ಶ್ವೇತಾ ಜೈನ್ ಎಸ್ಐಟಿ ಅಧಿಕಾರಿಗಳ ಮುಂದೆ ನಿನ್ನೆ ತಪ್ಪೊಪ್ಪಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 12 ಸರ್ಕಾರಿ ಅಧಿಕಾರಿಗಳು ಮತ್ತು 8 ಮಾಜಿ ಸಚಿವರು ಹಾಗೂ ಮಾಜಿ ಸಿಎಂಗೆ ಈ ಸೆಕ್ಸ್​ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಭಯ ಶುರುವಾಗಿದೆ. ಎಸ್​ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡ ಆರೋಪಿಗಳ ಬಳಿ 1000ಕ್ಕೂ ಅಧಿಕ ವಿಡಿಯೋ ಕ್ಲಿಪ್ಪಿಂಗ್​ಗಳು, ಸೆಕ್ಸ್​ ಚಾಟ್​ಗಳು, ಬ್ಲಾಕ್​ಮೇಲ್ ಮಾಡಲು ಇಟ್ಟುಕೊಂಡಿದ್ದ ವಿಡಿಯೋಗಳು ಸಿಕ್ಕಿವೆ. ಇವುಗಳಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಅಧಿಕಾರಿಗಳ ಜೊತೆಗಿನ ಸೆಕ್ಸ್​ ವಿಡಿಯೋಗಳೂ ಇವೆ.

ಕಾಲೇಜಿಗೆ ಹೋಗುವ 24 ಯುವತಿಯರನ್ನು ವಿಐಪಿಗಳಿಗೆ ಕಳುಹಿಸಿಕೊಡಲಾಗಿತ್ತು. ಸರ್ಕಾರಿ ಅಧಿಕಾರಿಗಳಿಂದ ಮತ್ತು ಮಾಜಿ ಸಚಿವರಿಂದ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಗುತ್ತಿಗೆಗಳನ್ನು ಪಡೆಯಲು ಈ ರೀತಿ ಅವರಿಗೆ ಹುಡುಗಿಯರನ್ನು ಪೂರೈಕೆ ಮಾಡಲಾಗಿತ್ತು. ಈ ಅಧಿಕಾರಿಗಳಿಂದ ಕಂಪನಿಗಳಿಗೆ ಗುತ್ತಿಗೆ ಕೊಡಿಸಿದ್ದಕ್ಕಾಗಿ ತಾನು ಹಾಗೂ ತನ್ನ ಆಪ್ತೆ ಆರತಿ ದಯಾಳ್ ಕಮಿಷನ್ ಪಡೆಯುತ್ತಿದ್ದರು ಎಂಬ ವಿಷಯವನ್ನೂ ಶ್ವೇತಾ ಜೈನ್ ಒಪ್ಪಿಕೊಂಡಿದ್ದಾಳೆ.

ಹೀಗಿರುತ್ತೆ ಪ್ಲ್ಯಾನ್:

ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಮೋನಿಕಾ ಯಾದವ್ ಎಂಬ ಯುವತಿಗೆ ನಂಬಿಸಿದ್ದ ಶ್ವೇತಾ ಆಕೆಯನ್ನು ಮಧ್ಯಪ್ರದೇಶ ಸರ್ಕಾರದ ಐಎಎಸ್​ ಅಧಿಕಾರಿಗಳ ಬಳಿ ಕಳುಹಿಸಿದ್ದಳು. ಅಲ್ಲಿ ಮೂವರು ಐಎಎಸ್​ ಅಧಿಕಾರಿಗಳನ್ನು ಶ್ವೇತಾ ಮೋನಿಕಾಗೆ ಪರಿಚಯ ಮಾಡಿಸಿದ್ದಳು. ಹಾಗೇ, ಮೋನಿಕಾಗೆ ಇಂದೋರ್​ನಿಂದ ಭೂಪಾಲ್​ಗೆ ಪ್ರಯಾಣ ಮಾಡಲು ಆಡಿ ಕಾರನ್ನು ಕೂಡ ನೀಡಿ ತನ್ನ ಜಾಲದೊಳಗೆ ಸಿಲುಕಿಸಿಕೊಳ್ಳಲು ಪ್ರಯತ್ನಿಸಿದ್ದಳು. ಆದರೆ, ಶ್ವೇತಾಳ ವರ್ತನೆಯಿಂದ ಇರುಸುಮುರುಸುಗೊಂಡ ಮೋನಿಕಾ ಕಾಲೇಜಿಗೆ ಅಡ್ಮಿಷನ್ ಮಾಡಿಸುವುದು ಬೇಡವೆಂದು ನರಸಿಂಗಗಢದಲ್ಲಿರುವ ತನ್ನ ಊರಿಗೆ ಹೋಗಿದ್ದಳು.

ಮೋನಿಕಾಳನ್ನು ಹೇಗಾದರೂ ಮಾಡಿ ಐಎಎಸ್​ ಅಧಿಕಾರಿಗಳ ಜೊತೆ ಫಿಕ್ಸ್​ ಮಾಡಬೇಕೆಂದು ಶ್ವೇತಾ ತನ್ನ ಆಪ್ತೆ ಆರತಿ ದಯಾಳ್​ ಜೊತೆಗೆ ಮೋನಿಕಾಳ ಮನೆಗೆ ಹೋಗಿ ಅವಳ ಅಪ್ಪ-ಅಮ್ಮನ ಜೊತೆ ಮಾತನಾಡಿ ಆಕೆಯನ್ನು ಭೂಪಾಲ್​ಗೆ ಕಳುಹಿಸುವಂತೆ ಮನವಿ ಮಾಡಿದ್ದರು. ಮಗಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲೆಂಬ ಕಾರಣಕ್ಕೆ ಅವರೂ ಮೋನಿಕಾಳನ್ನು ಭೂಪಾಲ್​ಗೆ ಕಳುಹಿಸಲು ಒಪ್ಪಿದ್ದರು. ಎನ್​ಜಿಓ ಒಂದು ಮೋನಿಕಾಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ವಹಿಸಿಕೊಳ್ಳುತ್ತದೆ ಎಂದು ಶ್ವೇತಾ ಹೇಳಿದ್ದಕ್ಕೆ ಮೋನಿಕಾಳ ತಂದೆ ಖುಷಿಯಿಂದ ಒಪ್ಪಿದ್ದರು. ಮೋನಿಕಾಳ ಮನೆಯಲ್ಲಿ ತೀವ್ರ ಬಡತನ ಇದ್ದುದ್ದನ್ನು ತಿಳಿದಿದ್ದ ಶ್ವೇತಾ ಸರಿಯಾಗೇ ಬಲೆ ಬೀಸಿದ್ದಳು. ಈ ಮೂಲಕ 18 ವರ್ಷದ ಯುವತಿ ಮೋನಿಕಾಳನ್ನು ತಮ್ಮ ಜೊತೆ ಭೂಪಾಲ್​ಗೆ ಕರೆದುಕೊಂಡು ಬಂದಿದ್ದಳು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ವಿಡಿಯೋ ಇಟ್ಟುಕೊಂಡು ಬ್ಲಾಕ್​ಮೇಲ್:

ಈ ಬಗ್ಗೆ ಎಸ್​ಐಟಿ ಮುಂದೆ ಹೇಳಿಕೆ ನೀಡಿರುವ ಮೋನಿಕಾ, ಒಂದು ದಿನ ಆರತಿ ನನ್ನ ಬಳಿ ಬಂದು ಶ್ವೇತಾ ಒಬ್ಬ ಐಎಎಸ್​ ಅಧಿಕಾರಿ ಜೊತೆಗೆ ಸೆಕ್ಸ್​ ನಡೆಸುತ್ತಿರುವ ಎಂಎಂಎಸ್​ ತೋರಿಸಿದ್ದಳು. ಅದೇರೀತಿ ಲೈಂಗಿಕವಾಗಿ ಅಧಿಕಾರಿಗಳನ್ನು ಸಂತೃಪ್ತಿಪಡಿಸಿದರೆ ನೀನು ಕೂಡ ಉನ್ನತ ಮಟ್ಟಕ್ಕೆ ಹೋಗಬಹುದು ಎಂದು ಹೇಳಿದ್ದಳು. ಆಗಸ್ಟ್ 30ರಂದು ಮೋನಿಕಾಳನ್ನು ಐಷಾರಾಮಿ ಹೋಟೆಲ್​ಗೆ ಕರೆದುಕೊಂಡು ಹೋಗಿ 60 ವರ್ಷದ ಇಂಜಿನಿಯರ್ ಹರ್ಭಜನ್ ಸಿಂಗ್ ಎಂಬುವವರನ್ನು ಪರಿಚಯ ಮಾಡಿಸಲಾಗಿತ್ತು. ನಂತರ ಆ ರಾತ್ರಿ ಮೋನಿಕಾಳ ಜೊತೆಗೆ ಹರ್ಭಜನ್ ಸಿಂಗ್ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡ ಆರತಿ ಹರ್ಭಜನ್ ಸಿಂಗ್​ಗೆ 3 ಕೋಟಿ ರೂ. ಬೇಡಿಕೆ ಇಟ್ಟಿದ್ದಳು. ಒಂದು ವೇಳೆ ಈ ವಿಚಾರವನ್ನು ಮನೆಯಲ್ಲಿ ಯಾರಿಗಾದರೂ ಹೇಳಿದರೆ ಆ ವಿಡಿಯೋವನ್ನು ಪೋರ್ನ್ ವೆಬ್​ಸೈಟ್​ನಲ್ಲಿ ಹಾಕುವುದಾಗಿ ಮೋನಿಕಾಳಿಗೆ ಬೆದರಿಕೆ ಹಾಕಿದ್ದಳು ಎಂದು ಮೋನಿಕಾ ಎಸ್​ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾಳೆ.

ಮಾಜಿ ಸಿಎಂಗೂ ಹೆಣ್ಣಿನ ಪೂರೈಕೆ:

ಬಡ ಕುಟುಂಬದಿಂದ ಬಂದ ಕಾಲೇಜು ಯುವತಿಯರಿಗೆ ಐಷಾರಾಮಿ ಜೀವನವನ್ನು ಪರಿಚಯಿಸಿ ಅವರು ಅದರತ್ತ ಆಕರ್ಷಿತರಾಗುವಂತೆ ಮಾಡುತ್ತಿದ್ದ ಶ್ವೇತಾ ಹಾಗೂ ಆರತಿ ದಯಾಳ್ ನಂತರ ಹನಿಟ್ರ್ಯಾಪ್​ಗೆ ಬಳಸಿಕೊಳ್ಳುತ್ತಿದ್ದರು. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಈ ಕಾಲೇಜು ಯುವತಿಯರನ್ನು ಒದಗಿಸುತ್ತಿದ್ದರು. ರಾಜಕಾರಣಿಗಳು ಕಾಲೇಜು ಯುವತಿಯರಿಗೇ ಹೆಚ್ಚು ಡಿಮ್ಯಾಂಡ್ ಇಡುತ್ತಿದ್ದುದರಿಂದ ಶ್ವೇತಾ ಇಂಥದ್ದೊಂದು ಜಾಲ ಹೆಣೆದಿದ್ದಳು. ಜೊತೆಗೆ 40 ವೇಶ್ಯೆಯರನ್ನೂ ಬಾಡಿಗೆ ಆಧಾರದಲ್ಲಿ ಇಟ್ಟುಕೊಂಡಿದ್ದಳು. ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಕಾಂಟಾಕ್ಟ್​ ಹೊಂದಿದ್ದ ಶ್ವೇತಾ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗೂ ಯುವತಿ ಮತ್ತು ಮಹಿಳೆಯರನ್ನು ಕಳುಹಿಸುತ್ತಿದ್ದಳು ಎಂಬ ವಿಷಯ ವಿಚಾರಣೆ ವೇಳೆ ತಿಳಿದುಬಂದಿದೆ.

Comments are closed.