ರಾಷ್ಟ್ರೀಯ

1,500 ಕೋಟಿ ಮೊತ್ತದ ಅವ್ಯವಹಾರ ಕಾರಣ ಡಿಕೆಶಿ​ಗೆ ಬೇಲ್​ ಸಿಗೋದು ಅನುಮಾನ

Pinterest LinkedIn Tumblr


ನವದೆಹಲಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರಿಗೆ ದೆಹಲಿ ಹೈಕೋರ್ಟ್​ನಲ್ಲೂ ಜಾಮೀನು ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ತಮ್ಮ ಪತ್ನಿ ಉಷಾ ಅವರ ಹೆಸರಲ್ಲಿ ಡಿ.ಕೆ. ಶಿವಕುಮಾರ್​ ಅವರು 1,500 ಕೋಟಿ ರೂ. ಮೌಲ್ಯದ ಷೇರು ವ್ಯವಹಾರ ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.

ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಡಿ.ಕೆ. ಶಿವಕುಮಾರ್​ ಅವರ 1,500 ಕೋಟಿ ರೂ. ಷೇರು ವ್ಯವಹಾರದ ಬಗ್ಗೆಯೂ ಪ್ರಸ್ತಾಪವಾಗಿತ್ತು. ಈ ಸಂದರ್ಭದಲ್ಲಿ ಅವರು ಕಾಫಿ ಡೇನಲ್ಲಿ 310 ಕೋಟಿ ರೂ. ಮೌಲ್ಯದ ಷೇರುಗಳನ್ನು ಉಷಾ ಅವರ ಹೆಸರಿನಲ್ಲಿ ಹೊಂದಲಾಗಿತ್ತು. ಈ ವ್ಯವಹಾರ ಪಾರದರ್ಶಕವಾಗಿ ನಡೆದಿದೆ. ಆದರೆ, ಷೇರುಗಳಲ್ಲಿ ಮಾಡಿರುವ ಹೂಡಿಕೆಯ ಹಣದ ಮೂಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.

ಡಿ.ಕೆ. ಶಿವಕುಮಾರ್​ ಅವರು 317 ಬ್ಯಾಂಕ್​ ಖಾತೆಗಳನ್ನು ಹೊಂದಿದ್ದಾರೆ. ಇವುಗಳ ಪೈಕಿ 15 ಬ್ಯಾಂಕ್​ ಖಾತೆಗಳು ಡಿಮ್ಯಾಟ್​ ಖಾತೆಗೆ ಜೋಡಣೆಗೊಂಡಿವೆ ಎನ್ನಲಾಗಿದೆ.

Comments are closed.