ರಾಷ್ಟ್ರೀಯ

ಅಮ್ಮ ಕ್ಷಮಿಸು ಎಂದು ಪತ್ರ ಬರೆದು 5ನೇ ಮಹಡಿಯಿಂದ ಜಿಗಿದು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Pinterest LinkedIn Tumblr


ಲಕ್ನೋ: ಇಲ್ಲಿನ ಹುಸೇನ್​ಗಂಜ್​ ನಗರದಲ್ಲಿ ಎಂಟನೇ ತರಗತಿ ಬಾಲಕಿ ಐದನೇ ಮಹಡಿಯಿಂದ ಕಳೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.

ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಬಾಲಕಿ ಸಾಯುವ ಮುನ್ನ ಡೆತ್​ ನೋಟ್​ ಬರೆದಿದ್ದಾಳೆ. “ಅಮ್ಮ, ನಾನು ಹೀಗೆ ಮಾಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸು. ದಯವಿಟ್ಟು ಕ್ಷಮಿಸು. ಮತ್ತು ನನ್ನ ಬಗ್ಗೆಯೇ ನನಗೆ ನಾಚಿಗೆಯಾಗುತ್ತಿದೆ, ಕ್ಷಮಿಸಿಬಿಡು ಅಮ್ಮ..” ಎಂದು ಪತ್ರದಲ್ಲಿ ಬಾಲಕಿ ಬರೆದಿದ್ದಾಳೆ.

ಮೃತ ಬಾಲಕಿಯ ತಾಯಿ ಖಾಸಗಿ ಬ್ಯಾಂಕ್​ವೊಂದರ ಮ್ಯಾಜೇನರ್​ ಆಗಿದ್ದಾರೆ. ತಂದೆ ನಿವೃತ್ತ ಸೈನಿಕರಾಗಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಬಾಲಕಿ ಓದಿನ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ ಎಂದು ತಾಯಿ ಬೈಯ್ದಿದ್ದರು. ಇದರಿಂದ ನೊಂದ ಬಾಲಕಿ ಸಾಯಲು ನಿರ್ಧರಿಸಿದ್ದಾಳೆ ಎನ್ನಲಾಗಿದೆ. ಆದಾಗ್ಯೂ, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಶಾಲೆಯಲ್ಲಿ ಏನಾದರೂ ಘಟನೆ ನಡೆದಿರಬಹುದು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಆದರೆ, ಕುಟುಂಬದವರ ಆರೋಪವನ್ನು ಶಾಲೆ ನಿರಾಕರಿಸಿದೆ. ಶಾಲೆಯ ಮೂಲಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸಾಧಾರಣ ವಿದ್ಯಾರ್ಥಿನಿ. ಮತ್ತು ಆಕೆಯ ಶೈಕ್ಷಣಿಕ ವಿಚಾರವಾಗಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಆಕೆಯ ಓದಿನ ಬಗ್ಗೆಯೂ ಯಾವುದೇ ದೂರುಗಳು ಇರಲಿಲ್ಲ ಎಂದು ಹೇಳಿವೆ.

Comments are closed.