ರಾಷ್ಟ್ರೀಯ

ಸೋನಿಯಾರಿಂದ ತಿಹಾರ್​ ಜೈಲಿನಲ್ಲಿ ಚಿದಂಬರಂನಷ್ಟೇ ಭೇಟಿ

Pinterest LinkedIn Tumblr


ನವದೆಹಲಿ(ಸೆ.23): ಐಎನ್​ಎಕ್ಸ್​ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ತಿಹಾರ್​ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಮತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಭೇಟಿಯಾಗಿದ್ದಾರೆ. ಆದರೆ ಅದೇ ಜೈಲಿನಲ್ಲಿರುವ ಕಾಂಗ್ರೆಸ್​ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್​ ಹೈ ಕಮಾಂಡ್​ ಭೇಟಿಯಾಗಲಿಲ್ಲ.

ಕಳೆದ ವಾರ ಕಾಂಗ್ರೆಸ್​ ನಾಯಕರಾದ ಗುಲಾಂ ನಬೀ ಅಜಾದ್​ ಮತ್ತು ಅಹಮದ್​ ಪಟೇಲ್​ ಮಾಜಿ ಹಣಕಾಸು ಸಚಿವ ಚಿಂದಂಬರಂ ಅವರನ್ನು ಭೇಟಿಯಾಗಿದ್ದರು. ಐಎನ್​ಎಕ್ಸ್​ ಮಾಧ್ಯಮ ಹಗರಣ ಸಂಬಂಧ ಭ್ರಷ್ಟಾಚಾರದ ಆರೋಪ ಹೊತ್ತು ಸೆ.5ರಿಂದಲೂ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವರ ಜೊತೆ ಕಾಂಗ್ರೆಸ್​ ನಾಯಕರು ಬೆಂಬಲಕ್ಕೆ ನಿಂತಿದ್ದಾರೆ.

2007ರಲ್ಲಿ ಐಎನ್​ಎಕ್ಸ್​​ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ವಿದೇಶ ನೇರ ಬಂಡವಾಳ ಸ್ವೀಕಾರಕ್ಕೆ ಹಣಕಾಸು ಸಚಿವಾಲಯ ಅನುಮತಿ ನೀಡಿತ್ತು. ಈ ಅನುಮತಿ ನೀಡಿದ 10 ವರ್ಷಗಳ ಬಳಿಕ ಅಂದರೆ 2017ರಲ್ಲಿ ಸಿಬಿಐ ಹಾಗೂ ಇಡಿ ಎರಡೂ ತನಿಖಾ ಸಂಸ್ಥೆಗಳು ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿದ್ದವು.

ಐಎನ್​ಎಕ್ಸ್​ ಮಾಧ್ಯಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್​ 21ರಂದು ಸಿಬಿಐ ಚಿದಂಬರಂ ಅವರನ್ನು ಬಂಧಿಸಿತ್ತು. ಬಳಿಕ ಸೆ. 5ರವರೆಗೂ ಚಿದಂಬರಂ ಸಿಬಿಐ ವಶದಲ್ಲಿದ್ದರು. ಸೆ.5ರಿಂದ ತಿಹಾರ್​ ಜೈಲಿನಲ್ಲಿರುವ ಚಿದಂಬರಂ ಅಕ್ಟೋಬರ್​ 3ರವರೆಗೂ ನ್ಯಾಯಾಂಗ ಬಂಧನದಲ್ಲಿರಬೇಕಿದೆ. ದೆಹಲಿ ವಿಶೇಷ ನ್ಯಾಯಾಲಯ ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಆಗಸ್ಟ್‌ 21ರಂದು ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಸೆಪ್ಟೆಂಬರ್ 5ರವರೆಗೂ ಚಿದು ಸಿಬಿಐ ವಶದಲ್ಲಿದ್ದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈಗ ಡಿಕೆಶಿ ಹಾಗೂ ಪಿ.ಚಿದಂಬರಂ ಇಬ್ಬರೂ ತಿಹಾರ್ ಜೈಲಿನಲ್ಲಿದ್ದಾರೆ. ಸೋನಿಯಾ ಡಿಕೆಶಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಹೈಕಮಾಂಡ್​ ಚಿದಂಬರಂ ಅವರನ್ನಷ್ಟೇ ಭೇಟಿಯಾಗಿದೆ.

ಸೋನಿಯಾ ಗಾಂಧಿ ಚಿದಂಬರಂ ಭೇಟಿಗಷ್ಟೇ ಅವಕಾಶ ಕೇಳಿದ್ದರು. ಡಿಕೆಶಿ ಭೇಟಿಗೆ ಅನುಮತಿ ಕೇಳಿಲ್ಲ. ಹೀಗಾಗಿ ಜೈಲು ಅಧಿಕಾರಿಗಳಿಂದ ಚಿದು ಭೇಟಿಗಷ್ಟೇ ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಕಾಂಗ್ರೆಸ್ ಹೈ ಕಮಾಂಡ್​ ಡಿಕೆಶಿ ಮೇಲೆ ಮುನಿಸಿಕೊಂಡಿದೆಯಾ ಎಂಬ ಅನುಮಾನ ಮೂಡಿಸಿದೆ.

Comments are closed.