ರಾಷ್ಟ್ರೀಯ

ಚೆಕ್​ಡ್ಯಾಂ ಬಳಿ ಟಿಕ್​ಟಾಕ್ ವಿಡಿಯೋಗೆ ಮತ್ತೊಂದು ಬಲಿ

Pinterest LinkedIn Tumblr


ತೆಲಂಗಾಣ (ಸೆಪ್ಟೆಂಬರ್​.22); ಯುವ ಜನರ ನಡುವೆ ಭಾರೀ ಜನಪ್ರಿಯತೆ ಗಳಿಸಿರುವ ಟಿಕ್​ಟಾಕ್ ಸಾಕಷ್ಟು ಜನರ ಜೀವಕ್ಕೂ ಕುತ್ತು ತಂದಿರುವ ಕುರಿತು ಇತ್ತೀಚೆಗೆ ಅನೇಕ ಸುದ್ದಿಗಳು ವರದಿಯಾಗುತ್ತಲೇ ಇದೆ. ಈ ನಡುವೆ ಅಧಿಕ ಪ್ರಮಾಣದಲ್ಲಿ ನೀರಿನ ಹರಿವಿದ್ದ ಚೆಕ್​ಡ್ಯಾಂ ಒಂದರಲ್ಲಿ ಅದರ ಸೆಳೆತದ ಕುರಿತ ಮಾಹಿತಿ ಇಲ್ಲದೆ ಯುವಕನೋರ್ವ ಟಿಕ್​ಟಾಕ್ ಮಾಡಲು ಮುಂದಾಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಪ್ರೇಮ್​ಕಾಲ್ ಭಾಗದಲ್ಲಿ ಈ ದುರ್ಘನೆ ಸಂಭವಿಸಿದೆ. ಇದೇ ಭಾಗದ ದಿನೇಶ್ ಎಂಬ ಯುವಕ ತನ್ನ ಇಬ್ಬರು ಗೆಳೆಯರ ಜೊತೆಗೆ ಹತ್ತಿರದ ಚೆಕ್​ಡ್ಯಾಂ ಒಂದಕ್ಕೆ ಸ್ನಾನಕ್ಕೆಂದು ತೆರಳಿದ್ದಾರೆ. ಈ ಸಂದರ್ಭದಲ್ಲಿ ಮೂವರೂ ಚೆಕ್​ ಡ್ಯಾಂನ ನೀರಿನ ಹರಿವು ಇದ್ದ ಪ್ರದೇಶದಲ್ಲಿ ಟಿಕ್​ಟಾಕ್ ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ನೀರಿನ ಹರಿವು ದಿಢೀರನೆ ಅಧಿಕವಾದ ಕಾರಣ ಮೂವರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ನೀರಿನಲ್ಲಿ ಕೊಚ್ಚಿ ಹೋದ ಯುವಕರ ಪೈಕಿ ಇಬ್ಬರು ಹೇಗೋ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ದಿನೇಶ್ ಎಂಬ ವ್ಯಕ್ತಿ ಮಾತ್ರ ನೀರಿನ ಸೆಳೆತಕ್ಕೆ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ ಇಡೀ ಆತನ ದೇಹಕ್ಕಾಗಿ ಹುಡುಕಾಟ ನಡೆಸಲಾಗಿತ್ತಾದರೂ ಮೃತದೇಹ ಪತ್ತೆಯಾಗಿರಲ್ಲ.

ಕೇಂದ್ರದ ಎನ್​ಡಿಆರ್​​ಎಫ್​ ತಂಡ ಇಂದು ಬೆಳಗ್ಗೆ ಕೊನೆಗೂ ಆತನ ದೇಹವನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿರುವ ಉಳಿದ ಇಬ್ಬರು ಗೆಳೆಯರು ಟಿಕ್​ಟಾಕ್ ವಿಡಿಯೋ ಮಾಡಿದ್ದರಿಂದಲೇ ಈ ಅನಾಹುತ ಸಂಭವಿಸಿತು ಎಂದು ತಿಳಿಸಿದ್ದಾರೆ.

Comments are closed.