ರಾಷ್ಟ್ರೀಯ

ಅ. 21ಕ್ಕೆ ಹರ್ಯಾಣ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ

Pinterest LinkedIn Tumblr


ನವದೆಹಲಿ: ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳ ವಿಧಾನಸಭಾ ಅವಧಿ ನವಂಬರ್ 9 ಹಾಗೂ 2 ರಂದು ಕೊನೆಗೊಳ್ಳುವ ಹಿನ್ನಲೆಯಲ್ಲಿ ಈಗ ವಿಧಾನಸಭಾ ಚುನಾವಣಾ ಘೋಷಣೆಗಾಗಿ ಮುಖ್ಯ ಚುನಾವಣಾ ಆಯುಕ್ತರಾದ ಸುನಿಲ್ ಆರೋರಾ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಇದೇ ವೇಳೆ ಅವರು ಪತ್ರಿಕಾಗೋಷ್ಠಿಯಲ್ಲಿ ಹರ್ಯಾಣ 1.82 ಕೋಟಿ ಮತದಾರರನ್ನು ಹೊಂದಿದ್ದರೆ ಮಹಾರಾಷ್ಟ್ರ 8.94 ಕೋಟಿ ಮತದಾರರನ್ನು ಹೊಂದಿದೆ ಎಂದರು. ಇದೇ ವೇಳೆ ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಅವರು ‘ಚುನಾವಣಾ ಪ್ರಚಾರಗಳು ನಮ್ಮ ಮೇಲೆ ಪರಿಸರದ ಮೇಲೆ ಬೆಲೆಯನ್ನು ತೆರುವಂತೆ ಮಾಡುತ್ತವೆ ಆದ್ದರಿಂದ ನಾನು ರಾಜಕೀಯ ಪಕ್ಷಗಳಲ್ಲಿ ವಿನಂತಿಸಿಕೊಳ್ಳುವುದಿಷ್ಟೇ ಪ್ಲಾಸ್ಟಿಕ್ ದೂರವಿರಿಸಿ ಮತ್ತು ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸಿ ಎಂದು ವಿನಂತಿಸಿಕೊಂಡರು.

ಈಗ ಅಕ್ಟೋಬರ್ 21 ರಂದು ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ರಾಜ್ಯ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಈ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಈಗ ಜಾರಿಯಲ್ಲಿರುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿದ್ದಾರೆ.

ಇದೇ ವೇಳೆ ಚುನಾವಣೆ ನಡೆಯುವ ಇನ್ನೊಂದು ರಾಜ್ಯವಾದ ಜಾರ್ಖಂಡ್ ನಲ್ಲಿ ಚುನಾವಣೆ ದಿನಾಂಕವನ್ನು ಪ್ರಕಟಿಸಲಿಲ್ಲ.ಇನ್ನು ಕರ್ನಾಟಕ ಸೇರಿ 64 ಕ್ಷೇತ್ರಗಳ ಉಪಚುನಾವಣೆ ಕೂಡ ಅಕ್ಟೋಬರ್ 21 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

Comments are closed.