ರಾಷ್ಟ್ರೀಯ

ಈ ಯುವತಿಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್​ , ದೊಡ್ಡ ಗಡ್ಡೆ, ಮೆಟಲ್​ ವಸ್ತುಗಳಿದ್ದವಂತೆ!

Pinterest LinkedIn Tumblr


ಲೂಧಿಯಾನಾ: ಈಕೆ 19 ವರ್ಷದ ಯುವತಿ. ಇತ್ತೀಚೆಗೆ ವೈದ್ಯರು ಯುವತಿಗೆ ಶಸ್ತ್ರಚಿಕಿತ್ಸೆ ಮಾಡಿ ವಿಚಿತ್ರ ವಸ್ತುವೊಂದನ್ನು ಹೊರತೆಗೆದಿದ್ದಾರೆ.

ಹೊಟ್ಟೇಲಿ ಪ್ಲಾಸ್ಟಿಕ್​ ಇತ್ತಂತೆ, ದೊಡ್ಡ ಗಡ್ಡೆ ಇತ್ತಂತೆ, ಮೆಟಲ್​ ವಸ್ತುಗಳಿದ್ದವಂತೆ ಅದನ್ನು ಆಪರೇಶನ್​ ಮೂಲಕ ಹೊರತೆಗೆಯಲಾಯಿತಂತೆ…ಎಂಬಂತಹ ಹಲವು ಸುದ್ದಿಗಳನ್ನು ನಾವು ಈಗಾಗಲೇ ಅನೇಕ ಬಾರಿ ಕೇಳಿದ್ದೇವೆ. ಹಾಗೇ ಈ ಯುವತಿಯದ್ದೂ ಒಂದು ವಿಚಿತ್ರ ಪ್ರಕರಣ. ಈಕೆಯ ಹೊಟ್ಟೆಯಿಂದ ವೈದ್ಯರು ತೆಗೆದಿದ್ದು ಕೂದಲ ಮುದ್ದೆಯನ್ನು !

ಪಂಜಾಬ್​ನ ಲೂಧಿಯಾನಾ ನಗರದಲ್ಲಿರುವ ಮಹಾವೀರ ಸಿವಿಲ್​ ಆಸ್ಪತ್ರೆಯಲ್ಲಿ ಯುವತಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬರೋಬ್ಬರಿ 22 ಸೆಂಮೀ ಉದ್ದ ಹಾಗೂ 8 ಸೆಂ.ಮೀ. ಅಗಲವಿರುವ ಕೂದಲ ರಾಶಿಯನ್ನು ಯುವತಿಯ ಹೊಟ್ಟೆಯಿಂದ ಹೊರಗೆ ತೆಗೆದಿದ್ದಾರೆ.

ವೈದ್ಯ ಮಿಲನ್​ ವರ್ಮಾ ಈ ಬಗ್ಗೆ ತಿಳಿಸಿದ್ದು, ಯುವತಿ ಅಪರೂಪದ ಮಾನಸಿಕ ಕಾಯಿಲೆಯೊಂದರಿಂದ ಬಳಲುತ್ತಿದ್ದು ತನ್ನ ಕೂದಲನ್ನು ತಾನೇ ತಿನ್ನುತ್ತಿದ್ದಳು. ಅಷ್ಟೇ ಅಲ್ಲದೆ ಮಣ್ಣು, ಚಾಕ್​ಪೀಸ್​, ಮರಳನ್ನೂ ತಿನ್ನುತ್ತಿದ್ದಳು ಎಂದು ತಿಳಿಸಿದ್ದಾರೆ.

ಈ ಶಸ್ತ್ರಕ್ರಿಯೆ ಕೂಡ ಸವಾಲಿನ ಕೆಲಸವೇ ಆಗಿತ್ತು. ಯಾಕೆಂದರೆ ಯುವತಿಗೆ ಅಲ್ಸರ್​ ಇದೆ. ಹಾಗೇ ಕಡಿಮೆ ತೂಕ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಸದ್ಯ ಯುವತಿ ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನಲಾಗಿದೆ.

Comments are closed.