ರಾಷ್ಟ್ರೀಯ

ಚಿನ್ನದ ಬೆಲೆ ದಾಖಲೆಯ 2,300 ರೂ. ಇಳಿಕೆ

Pinterest LinkedIn Tumblr


ಹೊಸದಿಲ್ಲಿ: ಚಿನ್ನ ಖರೀದಿ ಮಾಡುವ ಇಚ್ಛೆಯೇ? ಹಾಗಿದ್ದರೆ ಇದು ಸುಸಮಯ. ಮೂರು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಚಿನ್ನದ ಬೆಲೆ 2,300 ರೂ.ಗಳಷ್ಟು ಇಳಿಕೆಯಾಗಿದೆ. ಬೆಳ್ಳಿ ಕೂಡ ಪ್ರತಿ ಕೆಜಿಗೆ 5 ಸಾವಿರ ರೂ. ಇಳಿಕೆಯಾಗಿದೆ. ದೇಶದಲ್ಲಿ ಸತತ ಮೂರನೇ ದಿನವಾಗಿರುವ ಗುರುವಾರ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದೆ.

ಹೊಸದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ 270 ರೂ.ಗಳಷ್ಟು ಕಡಿಮೆಯಾಗಿದೆ. ಹೀಗಾಗಿ ಪ್ರತಿ 10 ಗ್ರಾಂ ಚಿನ್ನಕ್ಕೆ 38, 454 ರೂ. ಆಗಿದೆ. ಪ್ರತಿ ಕೆಜಿ ಬೆಳ್ಳಿಗೆ 380 ರೂ. ಇಳಿಕೆಯಾಗಿದ್ದು, ಗುರುವಾರ 47,310 ರೂ. ಆಗಿದೆ. ಸೌದಿ ತೈಲ ಸಂಸ್ಕರಣಾ ಸಂಸ್ಥೆ ಅರಾಮೊRà ಮೇಲೆ ಡ್ರೋನ್‌ ದಾಳಿ ನಡೆದ ಬಳಿಕ ಕಚ್ಚಾ ತೈಲದಲ್ಲಿ ಏರಿಕೆಯಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಚಿನ್ನ ಖರೀದಿ ಹೆಚ್ಚಾಗಿತ್ತು. ಹೀಗಾಗಿ ದರ ಆರು ವರ್ಷಗಳ ಗರಿಷ್ಠಕ್ಕೆ ಅಂದರೆ ಪ್ರತಿ 10 ಗ್ರಾಂಗೆ 39,885 ರೂ.ಗೆ ತಲುಪಿತ್ತು. ತೈಲೋತ್ಪಾದನೆ ಯಥಾ ಸ್ಥಿತಿಗೆ ತರುವ ಬಗ್ಗೆ ಸೌದಿ ರಾಜಮನೆತನ ಘೋಷಣೆ ಮಾಡುತ್ತಿದ್ದಂತೆಯೇ ಚಿನ್ನಕ್ಕೆ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.

Comments are closed.