ರಾಷ್ಟ್ರೀಯ

ಸ್ನೇಹಿತರೊಂದಿಗೆ ಮಲಗದಿದ್ದರೆ ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡುತ್ತೇನೆಂದ ಪತಿ!

Pinterest LinkedIn Tumblr


ನವದೆಹಲಿ: ಗೆಳೆಯರೊಂದಿಗೆ ಮಲಗದಿದ್ದರೆ ತಮ್ಮಿಬ್ಬರ ಸೆಕ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತೇನೆಂದ ಪತಿರಾಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಕೆಲವು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮನೆಗೆ ಬಂದ ತನ್ನ ಪತಿ ತನ್ನನ್ನು ಅವರ ಜೊತೆ ಮಲಗುವಂತೆ ಹೇಳಿದ್ದ. ಅದಕ್ಕೆ ತಾನು ಆಕ್ಷೇಪ ವ್ಯಕ್ತಪಡಿಸಿದಾಗ ತಮ್ಮಿಬ್ಬರ ಸೆಕ್ಸ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಬಳಿಕ ನನ್ನ ಗಂಡನ ಸ್ನೇಹಿತ ನನ್ನ ಮೇಲೆ ಅತ್ಯಾಚಾರ ಎಸಗಿದ ಎಂದು ಮಹಿಳೆ ಆರೋಪಿಸಿದ್ದಾಳೆ.

ಆತನು ಹೋದ ಬಳಿಕ ಮತ್ತೊಬ್ಬ ಕೂಡ ನನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ. ರಾತ್ರಿ ಮತ್ತೆ ಮನೆಗೆ ಬಂದ ಪತಿಯು ತನ್ನೊಂದಿಗೆ ಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಘಟನೆ ಬಳಿಕ ಸಂತ್ರಸ್ತೆಯು ಎಲ್ಲ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದು, ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪದ ಮೇಲೆ ಪತಿ ಹಾಗೂ ಆತನ ಸ್ನೇಹಿತರ ಮೇಲೆ ದೂರು ದಾಖಲಿಸಲಾಗಿದೆ.

Comments are closed.