ರಾಷ್ಟ್ರೀಯ

ಪೊಲೀಸರಿಂದ ಎರಡು ಮೇಕೆಗಳ ಬಂಧನ!

Pinterest LinkedIn Tumblr


ಹೈದರಾಬಾದ್​: ಇತ್ತೀಚೆಗಷ್ಟೇ ಹೈದರಾಬಾದ್​ ಪೊಲೀಸರು​ ಎರಡು ಮೇಕೆಗಳನ್ನು ಬಂಧಿಸಿ, ತಮ್ಮ ವಶಕ್ಕೆ ಪಡೆದುಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಕರೀಂನಗರ ಜಿಲ್ಲೆಯ ಹುಜರಬಾದ್​ ಪಟ್ಟಣದಲ್ಲಿನ ಸ್ವಯಂಪ್ರೇರಿತ ಪರಿಸರ ಸಂಸ್ಥೆ ನೆಟ್ಟಿದ್ದ ಸಸಿಯನ್ನು ಮೇಯ್ದಿರುವ ಆರೋಪಕ್ಕೆ ಮೇಕೆಗಳು ಗುರಿಯಾಗಿವೆ.

ಮರಗಳನ್ನು ಉಳಿಸಿ ಎಂಬ ಹೆಸರಿನ ಪರಿಸರ ಸಂಸ್ಥೆ ಮೇಕೆಗಳ ವಿರುದ್ಧ ಆರೋಪ ಮಾಡಿದ್ದು, ತಾವು ನೆಟ್ಟಿದ್ದ 900 ಸಸಿಗಳಲ್ಲಿ 250 ಸಸಿಗಳನ್ನು ತಿಂದುಹಾಕಿವೆ. ಪದೇಪದೆ ಇದೇ ಕೆಲಸಕ್ಕೆ ಮೇಕೆಗಳು ಮುಂದಾಗಿದ್ದಕ್ಕೆ ಅವುಗಳ ವಿರುದ್ಧ ಎಫ್​ಐಆರ್​ ದಾಖಲಿಸಿ ಪೊಲೀಸ್​ ವಶಕ್ಕೆ ಪಡೆದುಕೊಳ್ಳಲಾಗಿದೆ.

ಮೇಕೆಗಳ ಮಾಲೀಕ 1000 ರೂ. ದಂಡ ಕಟ್ಟಿದ ಬಳಿಕ ಅವುಗಳನ್ನು ಬಂಧನದಿಂದ ಮುಕ್ತಗೊಳಿಸಲಾಗಿದೆ. ಅಲ್ಲದೆ, ಮತ್ತೊಮ್ಮೆ ಇಂತಹ ಪ್ರಮಾದ ಆಗದ ರೀತಿ ನೋಡಿಕೊಳ್ಳುತ್ತೇನೆ ಎಂದು ಮಾಲೀಕ ಭರವಸೆ ನೀಡಿದ್ದಾನೆ.

Comments are closed.