ಮನೋರಂಜನೆ

ಪಕ್ಷದಲ್ಲಿ ಕಡೆಗಣನೆಗೆ ಬೇಸತ್ತು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ನಟಿ ಉರ್ಮಿಳಾ ಮತೋಂಡ್ಕರ್​​​

Pinterest LinkedIn Tumblr

ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಸೇರಿದ್ದ ನಟಿ, ರಾಜಕಾರಣಿ ಉರ್ಮಿಳಾ ಮತೋಂಡ್ಕರ್​​ ಕೈಗೆ ಗುಡ್​ ಬೈ ಹೇಳಿದ್ದಾರೆ.

ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಕ್ಷದಲ್ಲಿನ ಆಂತರಿಕ ರಾಜಕೀಯ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮೇ 16ರಂದು ಮುಂಬೈ ಕಾಂಗ್ರೆಸ್​ ಅಧ್ಯಕ್ಷ ಮಿಲಿಂಡ ಡಿಯೋರಾಗೆ ಪತ್ರ ಬರೆದಿರುವ ಅವರು, ಪಕ್ಷದಲ್ಲಿ ತಮ್ಮನ್ನು ಕಡೆಗಡಿಸಿದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

45 ವರ್ಷದ ಈ ನಟಿ, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉತ್ತರ ಮುಂಬಯಿನಿಂದ ಸ್ಪರ್ಧಿಸಿಲು ಬಯಸಿದ್ದರು. ಈ ವೇಳೆ ಪಕ್ಷದಲ್ಲಿನ ದ್ರೋಹದ ಬಗ್ಗೆ ಕೂಡ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಧ್ವನಿ ಎತ್ತಿದ್ದರು.

ಇನ್ನು ಪತ್ರದಲ್ಲಿ ತಮ್ಮ ಗೌರವ ಹಾಗೂ ಗೌಪ್ಯ ಸಂವಹನಗಳು ಮಾಧ್ಯಮದಲ್ಲಿ ಸೋರಿಕೆಯಾಗಿದೆ. ದ್ರೋಹದ ಕಾರ್ಯ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ನನ್ನ ರಾಜಕೀಯ ಮತ್ತು ಸಾಮಾಜಿಕ ಸೂಕ್ಷತೆಗಳನ್ನು ಪಕ್ಷದ ಆಂತರಿಕ ರಾಜಕೀಯದ ವಿರುದ್ಧ ಹೋರಾಡಲು ಸಾಧನವಾಗಿ ಬಳಸಿಕೊಳ್ಳಲು ಇಷ್ಟವಿಲ್ಲ. ಮುಂಬೈನ ಜನರಿಗಾಗಿ ನನ್ನ ಕೆಲಸ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಕಳೆದ ಮೇಯಂದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್​ ಗಾಂಧಿ ಅಧ್ಯಕ್ಷತೆಯಲ್ಲಿ ಇವರು ಕಾಂಗ್ರೆಸ್​ ಸೇರಿದ್ದರು.

Comments are closed.