ರಾಷ್ಟ್ರೀಯ

ಹೆಂಡತಿ ದೇಶಬಿಟ್ಟು ಹೋಗುವುದನ್ನು ತಡೆಯಲು ಪತಿಯೋರ್ವ ಮಾಡಿದ ಪ್ಲಾನ್ ನೋಡಿ ಶಾಕ್ ಗೊಂಡ ಪೊಲೀಸರು ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು…?

Pinterest LinkedIn Tumblr

ನವದೆಹಲಿ: ತನ್ನ ಪತ್ನಿ ದೇಶಬಿಟ್ಟು ಹೋಗುವುದನ್ನು ತಡೆಯಲು ವ್ಯಕ್ತಿಯೋರ್ವ ಮಾಡಿದ ಒಂದು ಕೆಲಸದಿಂದ ಪೊಲೀಸರು ಪರದಾಡುವಂತೆ ಮಾಡಿದೆ.

ಹೌದು ಆಗಸ್ಟ್ 8ರಂದು 29 ವರ್ಷದ ನಸೀರುದ್ದಿನ್ ಎಂಬಾತ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ನನ್ನ ಹೆಂಡತಿ ಫಿದಾಯಿನ್ ತೆರಳುತ್ತಿದ್ದಾಳೆ ಎಂದು ದೆಹಲಿ ಪೊಲೀಸರಿಗೆ ಕರೆ ಮಾಡಿದ್ದ.

ಈ ದೂರವಾಣಿ ಕರೆ ಹಿನ್ನೆಲೆಯಲ್ಲಿ ಕೂಡಲೇ ಅಲರ್ಟ್ ಆದ ಪೊಲೀಸರು ಇಂದಿರಾ ಗಾಂಧಿ ಏರ್ ಪೋರ್ಟ್ ನಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ನಸೀರುದ್ದಿನ್ ಪತ್ನಿ ಮಧ್ಯ ಪ್ರಾಚ್ಯದ ಗಲ್ಫ್ ಗೆ ಉದ್ಯೋಗವನ್ನರಸಿ ತೆರಳುತ್ತಿದ್ದಳು. ಇದನ್ನು ತಡೆಯುವ ಸಲುವಾಗಿ ನಸೀರುದ್ದಿನ್ ದೆಹಲಿಯ ಪೊಲೀಸರಿಗೆ ಹುಸಿ ಕರೆ ಮಾಡಿ ದುಬೈ ಅಥವಾ ಸೌದಿ ಅರೇಬಿಯಾಕ್ಕೆ ತೆರಳುವ ವಿಮಾನದಲ್ಲಿ ನನ್ನ ಪತ್ನಿ ಬಾಂಬ್ ಸ್ಫೋಟಿಸಲಿದ್ದಾಳೆ ಎಂದು ಹೇಳಿದ್ದ.

ಈ ಸಂಬಂಧ ಪೊಲೀಸರು ನಸೀರುದ್ದೀನ್ ನನ್ನ ಬಾವ್ನಾ ಪ್ರದೇಶದಲ್ಲಿ ಬಂಧಿಸಲಾಗಿದೆ. ನಸೀರುದ್ದೀನ್ ಚೆನ್ನೈನಲ್ಲಿ ಮ್ಯಾನುಫ್ಯಾಕ್ಟರಿಂಗ್ ಕಂಪನಿಯನ್ನು ನಡೆಸುತ್ತಿದ್ದ.

Comments are closed.