ರಾಷ್ಟ್ರೀಯ

ಲಡಾಖ್​​ನಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಸೈನಿಕರ ಜೊತೆಗೂಡಿ ವಿಶೇಷ ರೀತಿಯಲ್ಲಿ ಆಚರಣೆ ಮಾಡಿದ ಧೋನಿ

Pinterest LinkedIn Tumblr

ಲಡಾಖ್: ಸದ್ಯ ಕ್ರಿಕೆಟ್​ನಿಂದ ಬಿಡುವು ತೆಗೆದುಕೊಂಡು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಗುರುವಾರ ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ 73ನೇ ಸ್ವಾತಂತ್ರ್ಯೋತ್ಸವವನ್ನುಆಚರಿಸಿದರು.

ಆಗಸ್ಟ್​ 5 ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ, ಕಣಿವೆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು.

ಇಂದು ಧೋನಿ ಅವರು ನೂತನ ಕೇಂದ್ರಾಡಳಿತ ಪ್ರದೇಶ ಲಡಾಖ್​​ನ ಲೇಹ್ ಪ್ರದೇಶದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಸೈನಿಕರ ಜೊತೆಗೂಡಿ ವಿಶೇಷ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಬಳಿಕ ಲಡಾಖ್​ನ ಆರ್ಮಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹಿಂದೆ ಸರಿದಿರುವ ಧೋನಿ ಜುಲೈ 31 ರಂದು ಟೆರಿಟೋರಿಯಲ್ ಆರ್ಮಿ 106 ಬೆಟಾಲಿಯನ್(ಪ್ಯಾರ) ಸೇರಿಕೊಂಡಿದ್ದಾರೆ. ಜಮ್ಮ ಮತ್ತು ಕಾಶ್ಮೀರದ ಕಣಿವೆ ರಾಜ್ಯದಲ್ಲಿ ಧೋನಿ ಸೈನಿಕರ ಜೊತೆ ಗಸ್ತು ತಿರುಗುತ್ತಾ ಸೇವೆ ಸಲ್ಲಿಸುತ್ತಿದ್ದಾರೆ. ಆಗಸ್ಟ್ 15ರ ವರೆಗೆ ಸೇನೆ ಜೊತೆ ಸೇವೆ ಸಲ್ಲಿಸಲಿದ್ದಾರೆ. ಇಂದು(ಆ.15) ಸಿಯಾನ್ ಭೇಟಿ ಬಳಿಕ ಧೋನಿ ಸೇವೆ ಅಂತ್ಯವಾಗಲಿದೆ.

Comments are closed.