ರಾಷ್ಟ್ರೀಯ

ಕೇರಳದಲ್ಲಿ ವರುಣನ ಆರ್ಭಟಕ್ಕೆ ಅಸುನೀಗಿದವರ ಸಂಖ್ಯೆ 102ಕ್ಕೆ ಏರಿಕೆ

Pinterest LinkedIn Tumblr


ಹೊಸದಿಲ್ಲಿ: ಕೇರಳದಲ್ಲಿ ಮಳೆ, ಪ್ರವಾಹಕ್ಕೆ ಅಸುನೀಗಿದವರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ. ಅದಕ್ಕೆ ಪೂರಕವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಮಂಗಳ ವಾರ ರಾತ್ರಿಯಿಂದ ಧಾರಾಕಾರ ಮಳೆಯಾಗು ತ್ತಿದೆ. ಮಲಪ್ಪುರಂ, ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿ ಸಲಾಗಿದೆ. ತೀರ ಪ್ರದೇಶದ ವ್ಯಾಪ್ತಿಯಲ್ಲಿರುವ ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ತೆರಳದಂತೆಯೂ ಎಚ್ಚರಿಕೆ ನೀಡಲಾಗಿದೆ. ಕಣ್ಣೂರು ವಿವಿ ವ್ಯಾಪ್ತಿಯಲ್ಲಿನ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ.

ತಿರುವನಂತಪುರದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತತ್‌ಕ್ಷಣದ ಪರಿಹಾರವಾಗಿ ಸಂತ್ರಸ್ತರಿಗೆ ತಲಾ 10 ಸಾವಿರ ರೂ. ನೀಡಲಾಗುತ್ತದೆ. ಮನೆ ಮತ್ತು ಜಮೀನು ಕಳೆದುಕೊಂಡವರಿಗೆ 10 ಲಕ್ಷ, ಮನೆ ಕಳೆದುಕೊಂಡವರಿಗೆ 4 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ ಎಂದರು. 1.95 ಲಕ್ಷ ಮಂದಿ 1,118 ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದರು.

ಸಹಜ ಸ್ಥಿತಿಗೆ: ಇದೇ ವೇಳೆ ಹಲವು ದಿನಗಳಿಂದ ಧಾರಾಕಾರ ಮಳೆಗೆ ನಲುಗಿದ್ದ ಪಶ್ಚಿಮ ಮಹಾರಾಷ್ಟ್ರದ ಜಿಲ್ಲೆಗಳಾಗಿರುವ ಕೊಲಾØಪುರ, ಸಾಂಗ್ಲಿ ಜಿಲ್ಲೆಗಳಲ್ಲಿ ನಿಧಾನವಾಗಿ ಪರಿಸ್ಥಿತಿ ಯಥಾಸ್ಥಿತಿಗೆ ಹಿಂತಿರುಗುತ್ತಿದೆ. ಹೆಚ್ಚಿನ ನದಿಗಳಲ್ಲಿನ ಅಪಾಯದ ಮಟ್ಟಕ್ಕಿಂತ ಕೆಳಗೆ ಹರಿಯುತ್ತಿವೆ. ಮಂಗಳವಾರದ ವರೆಗೆ 6.45 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಪಾಕ್‌ ಮಳೆಗೆ 42 ಸಾವು: ಪಾಕಿಸ್ಥಾನದಲ್ಲಿ ಕೂಡ ಧಾರಾಕಾರ ಮಳೆಯಾಗುತ್ತಿದೆ. ವಿಶೇಷವಾಗಿ ಕರಾಚಿಯಲ್ಲಿ ಮಳೆ ಸಂಬಂಧಿತ ದುರಂತಗಳಲ್ಲಿ 42 ಮಂದಿ ಸಾವಿಗೀಡಾಗಿದ್ದಾರೆ.

Comments are closed.