ರಾಷ್ಟ್ರೀಯ

ಶೀಘ್ರದಲ್ಲೇ ರಿಲಯನ್ಸ್ ಡಿಜಿಟಲ್​ ಟಿವಿ ಬಿಡುಗಡೆ!

Pinterest LinkedIn Tumblr


ದೇಶದಾದ್ಯಂತ ಉಚಿತ ಡಾಟಾ ನೀಡುವ ಮೂಲಕ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಿದ್ದ ಜಿಯೋ, ಸಧ್ಯದಲ್ಲೇ ಡಿಜಿಟಲ್​ ಟಿವಿ ಲಾಂಚ್​ ಮಾಡಲಿದ್ದು, ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಈ ವಿಚಾರವನ್ನು ಪ್ರಕಟಿಸಿದ್ದಾರೆ.

ಸಧ್ಯದಲ್ಲೇ ಜಮ್ಮು& ಕಾಶ್ಮೀರ, ಲಡಾಕ್​ಗೆ ರಿಲಯನ್ಸ್ ಬಿಗ್ ಎಂಟ್ರಿ ನೀಡಲಿದ್ದು, ಇನ್ನು ಕೇವಲ 12 ತಿಂಗಳಲ್ಲಿ ದೇಶದಾದ್ಯಂತ ಜಿಯೋ ಗಿಗಾಫೈಬರ್ ಸೇವೆ ಸಿದ್ಧವಾಗಲಿದೆ ಎಂದು ಮುಕೇಶ್ ಅಂಬಾನಿ ವಿವರಣೆ ನೀಡಿದ್ದಾರೆ. ಅಲ್ಲದೆ ಜಿಯೋ ಇದೀಗಾ ಜಗತ್ತಿನ 2ನೇ ದೊಡ್ಡ ಮೊಬೈಲ್ ನೆಟ್​ವರ್ಕ್​ ಆಗಿದ್ದು, 1.3ಲಕ್ಷ ಕೋಟಿ ವಾರ್ಷಿಕ ವಹಿವಾಟನ್ನ ಹೊಂದಿದೆ. ಅತ್ಯಂತ ಕಡಿಮೆ ದರದಲ್ಲಿ ಡಿಟಿಹೆಚ್​+ ಇಂಟರ್ನೆಟ್ ಸೇವೆಗೆ ಸಿದ್ದರಿದ್ದೀವಿ ಅನ್ನೋದನ್ನು ಅವರ ಪ್ರಕಟಿಸಿದ್ದಾರೆ.

ವಿಶೇಷತೆ ಎಂದರೆ ಗಿಗಾಫೈಬರ್ ಪ್ರತಿ ಸೆಕೆಂಡ್ ಗೆ 1ಜಿಬಿ ವೇಗದಲ್ಲಿ ಕಾರ್ಯ ನಿರ್ವಹಿಸಲಿದೆ. ಅಲ್ಲದೆ ಈ ಜಿಯೋ ಡಿಜಿಟಲ್ ಟಿವಿ ಹೊಂದಿರುವವರಿಗೆ ಪ್ರತಿ ತಿಂಗಳಿಗೆ 500 ಜಿಬಿ ಡಾಟಾ ಉಚಿತ, 600ಕ್ಕೂ ಅಧಿಕ ಚಾನೆಲ್​ಗಳ ಸೌಲಭ್ಯ ಲಭ್ಯವಾಗಲಿದೆ. ಒಟ್ಟಾರೆ ಈಗಾಗಲೇ ಜಿಯೋ 4ಜಿ ಸಿಮ್ ಮೂಲಕ ಡಿಜಿಟಲ್ ಕ್ಷೇತ್ರದಲ್ಲಿ ಧೂಳೆಬಿಸುತ್ತಿರುವ ರಿಲಯನ್ಸ್ ಜಿಯೋ ಟೆಲಿವಿಷನ್ ಮಾರ್ಕೆಟ್​ಗೂ ಎಂಟ್ರಿ ಕೊಡಲು ಮುಂಧಾಗಿದ್ದು, ಇದರಿಂದ ಷೇರು ಸೇರಿದಂತೆ ಹಲವು ವ್ಯಾಪಾರ ಕ್ಷೇತ್ರಗಳಲ್ಲಿ ರಿಲಯನ್ಸ್ ಸಂಚಲನ ಮೂಡಿಸಿದೆ.

Comments are closed.