
ಬೆಂಗಳೂರು: ಇಂದಿನ ದಿನಮಾನದಲ್ಲಿ ಶುಭ ಸಮಾರಂಭ, ಯಾವುದೇ ಮಹತ್ವದ ಕಾರ್ಯ ಇದೆ ಅಂದ್ರೆ ಸಾಕು, ನಮ್ ಹೆಣ್ಮಕ್ಳು ಅದ್ಧೂರಿಯಾಗಿ ರೆಡಿಯಾಗ್ತಾರೆ. ಹೀಗೆ ರೆಡಿಯಾಗೋಕ್ಕೆ ಬ್ಯೂಟಿಪಾರ್ಲರ್‌ಗಂತೂ ಹೋಗೇ ಹೋಗ್ತಾರೆ. ಆದ್ರೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್‌ಗೆ ಹೋಗಿ, ಸೌಂದರ್ಯವೇ ಹಾಳಾಗಿ ಹೋದ್ರೆ ಏನ್ ಕಥೆ..? ಹೀಗೆ ಬ್ಯುಟಿಷಿಯನ್ ಮಾಡಿದ ಯಡವಟ್ಟಿನಿಂದ ಮಹಿಳೆಯ ಮುಖ ಸುಟ್ಟುಹೋಗಿದೆ.
ಫೇಶಿಯಲ್ ಮಾಡಿಸಿಕೊಳ್ಳಲು ಹೋದಾಗ, ಬ್ಯುಟಿಷಿಯನ್ ಮಾಡಿದ ಯಡವಟ್ಟಿಗೆ, ವೈದ್ಯೆ ಆಸ್ಪತ್ರೆ ಪಾಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಲ್ಲಿನ ಸಿ.ಎಂ.ಹೆಚ್ ರಸ್ತೆಯಲ್ಲಿ ಕ್ಲಬ್ ಸಿಟ್ರಸ್ ಸಲೂನ್‌ನಲ್ಲಿ ಈ ಘಟನೆ ನಡೆದಿದ್ದು, ಯಶೋಧಾ ಎಂಬ ವೈದ್ಯೆ ಫೇಶಿಯಲ್ ಮಾಡಿಸಿಕೊಳ್ಳಲು ಈ ಬ್ಯುಟಿಪಾರ್ಲರ್‌ಗೆ ತೆರಳಿದ್ದರು. ಈ ವೇಳೆ ತಣ್ಣೀರು ಹಾಕುವ ಬದಲು ಬೀಸಿ ನೀರು ಹಾಕಿದ ಪರಿಣಾಮ ವೈದ್ಯೆಯ ಮುಖ ಸಂಪೂರ್ಣ ಸುಟ್ಟುಹೋಗಿದೆ.
ವೆರೋನಿಕಾ ಎಂಬಾಕೆಯ ಒಡೆತನದಲ್ಲಿ ಈ ಸಲೂನ್ ನಡೆಯುತ್ತಿದ್ದು, ಘಟನೆ ಬಳಿಕ ಸಿಬ್ಬಂದಿ ಪರಾರಿಯಾಗಿದ್ದಾರೆ. ಇನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದೇ, ವೈದ್ಯೆಯನ್ನ ದೆಹಲಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.