ರಾಷ್ಟ್ರೀಯ

ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರಿಂದ ಮೂವರು ಕಾಂಗ್ರೆಸ್​ ನಾಯಕರ ಮೇಲೆ ಹಲ್ಲೆ

Pinterest LinkedIn Tumblr

ಭೋಪಾಲ್​: ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಮೂವರು ಕಾಂಗ್ರೆಸ್​ ನಾಯಕರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.

ಗುರುವಾರ ರಾತ್ರಿ ಮಧ್ಯಪ್ರದೇಶದ ಬೆಟುಲ್​ ಜಿಲ್ಲೆಯ ನವಲ್ಸಿನ್​ ಗ್ರಾಮದಲ್ಲಿ ಗುಂಪೊಂದು ಮಕ್ಕಳನ್ನು ಕದ್ದೊಯ್ದಿದೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಹೀಗಾಗಿ ಮುಖ್ಯರಸ್ತೆಯಲ್ಲಿ ಮರದ ದಿಮ್ಮಿಗಳನ್ನು ಅಡ್ಡಹಾಕಲಾಗಿತ್ತು.

ಕಾಂಗ್ರೆಸ್​ನ ಮೂವರು ಸ್ಥಳೀಯ ನಾಯಕರಾದ ಧರ್ಮೇಂದ್ರ ಶುಕ್ಲಾ, ಧರ್ಮು ಸಿಂಗ್​ ಲಾಂಜಿವಾರ್​ ಮತ್ತು ಲಲಿತ್​ ಬಾರಸ್ಕರ್​ ಒಂದೇ ಕಾರಿನಲ್ಲಿ ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಮುಖ್ಯರಸ್ತೆಯಲ್ಲಿ ಅಡ್ಡ ಹಾಕಲಾಗಿದ್ದ ಮರದ ದಿಮ್ಮಿಗಳನ್ನು ನೋಡಿದ ಇವರು, ಇದು ಹೆದ್ದಾರಿ ಕಳ್ಳರ ಕೃತ್ಯವೆಂದು ಭಾವಿಸಿ, ಕಾರಿನಿಂದ ಕೆಳಗೆ ಇಳಿಯದೆ ಕುಳಿತಿದ್ದಾರೆ. ಈ ವೇಳೆ ಕಾರನ್ನು ಕಂಡ ಗ್ರಾಮಸ್ಥರು ಇವರು ಮಕ್ಕಳ ಕಳ್ಳರ ಗುಂಪೇ ಇರಬೇಕು ಎಂದು ಭಾವಿಸಿ, ಕಾರನ್ನು ಸುತ್ತುವರೆದಿದ್ದಾರೆ. ಕಾರನ್ನು ಜಖಂಗೊಳಿಸಿ, ಮೂವರನ್ನು ಕಾರಿನಿಂದ ಹೊರಗೆ ಎಳೆದು, ಚೆನ್ನಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು ಕಾರನ್ನು ಸುತ್ತುವರೆದಿದ್ದಾರೆ ಮತ್ತು ಕಾರನ್ನು ಜಖಂಗೊಳಿಸಿದ್ದಾರೆ. ಆನಂತರ ಮೂವರನ್ನು ಹೊರಗೆ ಎಳೆದು, ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಬೆಟುಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮ್​ ಸ್ನೇಹಿ ಮಿಶ್ರಾ ತಿಳಿಸಿದ್ದಾರೆ.

ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಜನರ ಮೇಲೆ ಗುಂಪು ದಾಳಿ ಮಾಡುವ ಹಲವು ಪ್ರಕರಣಗಳು ಕಳೆದ ಒಂದು ವಾರದಲ್ಲಿ ಮಧ್ಯಪ್ರದೇಶ ರಾಜ್ಯಾದ್ಯಂತ ನಡೆದಿವೆ. ಈ ಸಂಬಂಧ 12 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Comments are closed.