
ನವದೆಹಲಿ(ಜುಲೈ.16): ಯುವಕನೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಶಂಕಿಸಿ ಪಾಗಲ್ ಪ್ರೇಮಿಯೋರ್ವ ತನ್ನ ಪ್ರೇಯಸಿಯನ್ನೇ ಕೊಂದ ಅಮಾನುಷ ಘಟನೆ ನಾಗ್ಪುರದಲ್ಲಿ ನಡೆದಿದೆ. ಆಕೆಯನ್ನ ಪ್ರಾಣಕ್ಕಿಂತ ಹೆಚ್ಚಾಗಿಯೇ ಪ್ರೀತಿಸುತ್ತಿದ್ದ ಈತ, ತನ್ನ ಕೈಯ್ಯಾರೆ ಕಲ್ಲಿನಿಂದ ಮುಖವ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಮಹಾರಾಷ್ಟ್ರದ ನಾಗಪುರ ಮೂಲದ ನಿವಾಸಿ ಅಶ್ರಫ್ ಶೇಕ್. ಈತ ಮಾಡೆಲ್ ಖುಷಿ ಪರಿಹಾರ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಅಲ್ಲದೇ ಮದುವೆಯಾಗಿ ಒಟ್ಟಿಗೆ ಬದುಕಬೇಕೆಂದು ನಿರ್ಧರಿಸಿದ್ದ. ಆದರೆ, ಇತ್ತೀಚೆಗೆ ಯಾಕೋ ಈಕೆ ವರ್ತನೆಯಲ್ಲಿ ಕೆಲವು ಬದಲಾವಣೆಗಳು ಕಂಡವು. ಇದರಿಂದ ಬೇಸರಗೊಂಡಿದ್ದ ಅಶ್ರಫ್, ಈಕೆ ಜತೆಗೆ ಸದಾ ಜಗಳವಾಡುತ್ತಿದ್ದ. ಈ ಜಗಳವೇ ತಮ್ಮಿಬ್ಬರ ನಡುವಿನ ಪ್ರೀತಿಗೆ ತಿಲಾಂಜಲಿ ಇಡುತ್ತೇ ಎಂದು ಭಾವಿಸಿರಲಿಲ್ಲ.
ಕಳೆದ ಶನಿವಾರ ಇಬ್ಬರೂ ಖುಷಿಯಾಗಿ ಎಲ್ಲಿಗೋ ಹೊರಗೆ ಹೊರಟಿದ್ದರು. ಎಂದಿನಂತೇ ಜಗಳದ ಬಳಿಕ ಕಾರಿನಲ್ಲೇ ತೆರಳಿದ್ದರು. ಪಂಡುರ್ನಾ-ನಾಗ್ಪುರ ಎಂಬ ಹೆದ್ದಾರಿ ಸಮೀಪದ ಸಾವ್ಲಿ ಫತಾ ಎಂಬ ನಿರ್ಜನ ಪ್ರದೇಶಕ್ಕೆ ಅಶ್ರಫ್ ಕಾರು ತಂದು ನಿಲ್ಲಿಸಿದ.
ಬಳಿಕ ಆಕೆಯ ಜತೆ ಮತ್ತೆ ಜಗಳ ಮಾಡಲು ಮುಂದಾದ. ಇಬ್ಬರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆಯೇ ಅಶ್ರಫ್, ಆಕೆಯನ್ನು ಕೆಳಕ್ಕೆ ಕೆಡವಿದ. ಅಲ್ಲೇ ಪಕ್ಕದಲ್ಲಿದ್ದ ಕಲ್ಲು ತೆಗೆದುಕೊಂಡು ಸಿನಿಮೀಯ ರೀತಿಯಲ್ಲಿ ಮುಖವ ಜಜ್ಜಿ ಭೀಕರವಾಗಿ ಕೊಲೆಗೈದ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ ಕೊಲೆಗಾರ ಅಶ್ರಫ್ನನ್ನು ಪೊಲೀಸರು ಬಂಧಿಸಿದ್ದಾರೆ.
Comments are closed.