ರಾಷ್ಟ್ರೀಯ

ಸರ್ಕಾರಿ ವೈದ್ಯರು, ಸಿಬ್ಬಂದಿ ನಿರ್ಲಕ್ಯದಿಂದಾಗಿ ಆಸ್ಪತ್ರೆಯಲ್ಲಿ ತನ್ನ ಹೆರಿಗೆಯನ್ನು ತಾನೇ ಮಾಡಿಕೊಂಡ ಗರ್ಭಿಣಿ!

Pinterest LinkedIn Tumblr

ನಾಗ್ಪುರ: ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ- ಜಿಎಂಸಿಎಚ್ ನಲ್ಲಿ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬರು, ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಯ ನಿರ್ಲಕ್ಯದಿಂದಾಗಿ ತನ್ನ ಹೆರಿಗೆಯನ್ನು ತಾನೇ ಮಾಡಿಕೊಂಡಿರುವ ಅಘಾತಕಾರಿ ಘಟನೆ ನಡೆದಿದೆ.

ಹುಡಕೇಶ್ವರ ನಿವಾಸಿಯಾಗಿರುವ ಚೊಚ್ಚಲ ಗರ್ಭಿಣಿ ಸುಕೇಶಿನಿ ಶ್ರೀಕಾಂತ್ ಚಟಾರೆ(23) ಗರ್ಭಧರಿಸಿದ ನಂತರ ಮೊದಲಿನಿಂದಲೂ ಜಿಎಂಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೈಕೆ ಪಡೆದುಕೊಳ್ಳುತ್ತಿದ್ದರು.

ಪ್ರಸವದ ದಿನ ಸಮೀಪಿಸುತ್ತಿರುವಂತೆಯೇ, ಆಕೆಯನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಬ್ಬಂದಿ ಆಕೆಯನ್ನು ವಾರ್ಡ್ ಸಂಖ್ಯೆ 33ರಲ್ಲಿ ನೆಲೆದ ಮೇಲೆ ಮಲಗಿಸಿದ್ದರು. ಇದಕ್ಕೆ ಸಂಬಂಧಿಕರು ಆಕ್ಷೇಪಿಸಿದಾಗ, ಆಕೆಗೆ ಮಲಗಲು ಮಂಚ ಒದಗಿಸಿದ್ದರು.

ಭಾನುವಾರ ಬೆಳಗಿನ ಜಾವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ. ಕೂಡಲೇ ಆಕೆಯನ್ನು ಹೆರಿಗೆ ವಾರ್ಡ್ ಗೆ ಕರೆದೊಯ್ದರು. ಸ್ವಲ್ಪಕಾಲ ನೋಡಿದ ವೈದ್ಯರು. ವಾರ್ಡ್ ನಿಂದ ಹೊರಗೆ ತೆರಳಿದ್ದರು.

ನಂತರ ವಾರ್ಡ್ ನಲ್ಲಿ ಸುಕೇಶಿನಿ ಒಬ್ಬಳೇ ಇದ್ದರು. ಬೆಳಗಿನ ಜಾವ 5.10ರಲ್ಲಿ, ಸಹಾಯ ಕೋರಿ ಜೋರಾಗಿ ಕಿರುಚಲು ಆರಂಭಿಸಿದ್ದರು. ಇದನ್ನು ಆಲಿಸಿದ ಮತ್ತೊಬ್ಬ ರೋಗಿಯ ಸಂಬಂಧಿಕರೊಬ್ಬರು ಎಚ್ಚರಗೊಂಡು ಬಂದು ನೋಡಿದಾಗ, ಮಹಿಳೆಯ ಗರ್ಭದಿಂದ ಮಗುವಿನ ತಲೆ ಹೊರಬಂದಿದ್ದು, ಮಗುವನ್ನು ಹೊರಗೆ ಎಳೆಯುವಂತೆ ಸುಕೇಶಿನಿಗೆ ಆಕೆಯ ಸಂಬಂಧಿಕರೊಬ್ಬರು ಹೇಳುತ್ತಿದ್ದರು ಮೊದಲು ಶಿಶುವನ್ನು ಗರ್ಭದಿಂದ ಹೊರಗೆಳೆಯಲು ಆಕೆ ನಿರಾಕರಿಸಿದರೂ, ನೋವು ತಾಳಲಾರದೆ ಮಗುವನ್ನು ಹೊರಗೆಳೆದಳು ಎಂದು ಮೂಲಗಳು ತಿಳಿಸಿವೆ.

ನಂತರ ಬಾಣಂತಿಯ ತಾಯಿ ಧಾವಿಸಿ ಕರ್ತವ್ಯದಲ್ಲಿದ್ದ ಶುಶ್ರೂಷಕಿಯರನ್ನು ಎಬ್ಬಿಸಿದ್ದರು, ಹೊಕ್ಕುಳ ಬಳ್ಳಿಯನ್ನು ಕತ್ತರಿಸಿ, ನವಜಾತ ಶಿಶುವಿನೊಂದಿಗೆ ನೆಲದ ಮೇಲೆ ಮಲಗುವಂತೆ ಸೂಚಿಸಿದರು. ತನ್ನ ಹೆರಿಗೆ ತಾನೇ ನಡೆಸಿಕೊಳ್ಳುವ ಪ್ರಯತ್ನದಿಂದಾಗಿ ಆಕೆಯ ದೇಹದಿಂದ ಭಾರಿ ಪ್ರಮಾಣದ ರಕ್ತ ಸ್ರಾವ ಉಂಟಾಗಿದೆ.

ಭಾನುವಾರ ಬೆಳಿಗ್ಗೆ 10 ಗಂಟೆಯವರೆಗೆ ಬಾಣಂತಿ ಹಾಗೂ ನವಜಾತ ಶಿಶು ನೆಲದಮೇಲೆ ಮಲಗಿಸಲಾಗಿತ್ತು. ಸಂಬಂಧಿಕರು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಿಗೆ ದೂರು ಸಲ್ಲಿಸಿದಾಗ, ಆಕೆಗೆ ಮಂಚ ಒದಗಿಸಲಾಗಿದೆ.

Comments are closed.